ಹನಗೋಡು ಹೋಬಳಿಯ ನೇಗತ್ತೂರು ಗ್ರಾಮದ ವೆಂಕಟೇಶ್ ಅವರ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿರುವುದು. 
ಜಿಲ್ಲೆ

ನೇಗತ್ತೂರಿನಲ್ಲಿ ಹುಲಿ ದಾಳಿಗೆ ಹಸು ಬಲಿ

ರವಿಕುಮಾರ್ ಪಿ. ಕೆ

ಹನಗೋಡು: ಹನಗೋಡು ಹೋಬಳಿಯ ನೇಗತ್ತೂರು ಗ್ರಾಮದಲ್ಲಿ ಗುರುವಾರ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ನೇಗತ್ತೂರು ಗ್ರಾಮದ ವೆಂಕಟೇಶ್ ಅವರು ಹಸುವನ್ನು ಕಾಡಂಚಿನಲ್ಲಿರುವ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದರು. ಮಧ್ಯಾಹ್ನ ವೇಳೆ ಹುಲಿಯೊಂದು ದಿಢೀರ್ ದಾಳಿ ನಡೆಸಿ ಹಸುವಿನ ಕುತ್ತಿಗೆ ಹಿಡಿದು ರಕ್ತ ಹೀರಿ ಸಾಯಿಸಿದೆ. ಹುಲಿ ಕಂಡು ಗಾಬರಿಗೊಂಡ ವೆಂಕಟೇಶ್ ಹಾಗೂ ಅಕ್ಕಪಕ್ಕದಲ್ಲಿ ಜಾನುವಾರು, ಕುರಿಯನ್ನು ಮೇಯಿಸುತ್ತಿದ್ದ ದನಗಾಯಿಗಳು ಜೋರಾಗಿ ಕೂಗಾಟ ನಡೆಸಿದ್ದರಿಂದ ಬೆದರಿದ ಹುಲಿಯು ಪಕ್ಕದ ಶೆಟ್ಟಹಳ್ಳಿ ಅರಣ್ಯದೊಳಗೆ ಸೇರಿಕೊಂಡಿದೆ.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸುತ್ತಮುತ್ತ ಜಾನುವಾರು, ಕುರಿಗಳನ್ನು ಮೇಯಿಸುತ್ತಿದ್ದ ದನಗಾಹಿ, ಕುರಿಗಾಹಿಗಳನ್ನು ತಕ್ಷಣವೇ ಸ್ಥಳದಿಂದ ತೆರಳುವಂತೆ ಎಚ್ಚರಿಸಿ ಕಳುಹಿಸಿದ್ದಾರೆ.