ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿ ಗ್ರಾಮದ ಮಲ್ಲೇಶ್ ಎಂಬುವರ ಹಸುವನ್ನು ಹುಲಿ ಕೊಂದುಹಾಕಿದೆ. 
ಜಿಲ್ಲೆ

ಹುಲಿ ದಾಳಿಗೆ ಹಸು ಬಲಿ

ಗುಂಡ್ಲುಪೇಟೆ: ತಾಲೂಕಿನ ಕುರುಬರಹುಂಡಿ ಗ್ರಾಮದದಲ್ಲಿ ಹುಲಿ ದಾಳಿಗೆ ಮೇಯುತ್ತಿದ್ದ ಹಸು ಬಲಿಯಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮದ ಮಲ್ಲೇಶ್ ಎಂಬುವರ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ ಹಸು ಮೇಯುವಾಗ ಏಕಾಏಕಿ ಹುಲಿ ದಾಳಿ ನಡೆಸಿದೆ. ಘಟನೆಯಲ್ಲಿ ಹಸು ಸಾವಿಗೀಡಾಗಿದ್ದು, ಇದರ ಸುಮಾರು 50 ಸಾವಿರ ರೂ. ಎನ್ನಲಾಗಿದೆ. ವಿಷಯ ತಿಳಿದ ಓಂಕಾರ್ ವಲಯದ ಡಿಆರ್‌ಎಫ್‌ಒ ಅಮರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಶೀಘ್ರವೇ ಜಾನುವಾರು ನಷ್ಟಕ್ಕೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.