ದೊಡ್ಡಬಳ್ಳಾಪುರ ತಾಲೂಕು ಘಾಟಿ ಸುಬ್ರಮಣ್ಯ ೇತ್ರದ ಪಕ್ಕದಲ್ಲಿರುವ ಗೋಶಾಲೆಯಲ್ಲಿ ಸಗಣಿಯಿಂದ ತಯಾರಾಗಿರುವ ಗಣೇಶ ಮೂರ್ತಿಗಳು.  
ಜಿಲ್ಲೆ

ಮಾರುಕಟ್ಟೆಗೆ ಬಂದ ಗೋಮಯ ಗಣೇಶ

ತೂಬಗೆರೆ: ಗೌರಿ&ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮನೆಯಲ್ಲಿ ಗಣೇಶ ಕೂರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರಿಸರ ಸ್ನೇಹಿ ಗಣಪತಿ ಕಡೆಗೆ ಜನ ಮನಸ್ಸು ಮಾಡುತ್ತಿದ್ದಾರೆ. ಹೀಗಿರುವಾಗ ಮಾರುಕಟ್ಟೆಗೆ ಸಗಣಿಯಿಂದ ತಯಾರಾದ ಗಣಪತಿಗಳೂ ಎಂಟ್ರಿ ಕೊಟ್ಟಿದ್ದು, ಜನ ಈ ಮೂರ್ತಿಗಳನ್ನು ಖರೀದಿಸಲು ಬುಕ್ಕಿಂಗ್​ ಮಾಡಿಕೊಳ್ಳುತ್ತಿದ್ದಾರೆ. ಹೌದು...ಈ ಮೂರ್ತಿಗಳನ್ನು ತೂಬಗೆರೆ ಹೋಬಳಿ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದ ಪಕ್ಕದಲ್ಲಿರುವ ರಾಷ್ಟ್ರೊತ್ಥಾನ ಗೋಶಾಲೆಯಲ್ಲಿ ನಿರ್ಮಿಸಲಾಗುತ್ತಿದ್ದು, ಗೋಮಯ ಗಣೇಶನೆಂದೇ ಖ್ಯಾತಿ ಪಡೆದಿದೆ. ಆನ್​ಲೈನ್​ ಬುಕ್ಕಿಂಗ್​ ಮಾತ್ರವಲ್ಲದೆ ಬೆಂಗಳೂರಿನ ಮಾರುಕಟ್ಟೆಗಳಲ್ಲೂ ಮೂರ್ತಿಗಳನ್ನು ಮಾರಾಟಕ್ಕಿಡಲಾಗುತ್ತಿದೆ. ಇಲ್ಲಿ ತಯಾರಾಗುವ ಮೂರ್ತಿಗಳೆಲ್ಲವೂ ಸಂಪೂರ್ಣವಾಗಿ ನೈಸರ್ಗಿಕ.

ಯಾವುದೇ ರಾಸಾಯನಿಕ ಬಣ್ಣಗಳನ್ನು ಅಥವಾ ವಸ್ತುಗಳನ್ನು ಬಳಸುವುದಿಲ್ಲ. ಪೂಜೆಯ ನಂತರ ಇದು ಸುಲಭವಾಗಿ ಮಣ್ಣಿನಲ್ಲಿ ಕರಗುತ್ತದೆ. ನಂತರ ಗೊಬ್ಬರವಾಗಿ ಬಳಸಬಹುದು. ಇದು ಪರಿಸರಕ್ಕೆ ಹಾನಿಕಾರಕವಲ್ಲ ಮತ್ತು ಪೂಜೆಗೆ ಸೂಕ್ತವಾಗಿದೆ. ಕೆಲವರು ಗೋಮಯ ಗಣೇಶನ ವಿಗ್ರಹವು ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬುತ್ತಾರೆ. ಹಸುವಿನ ಸಗಣಿಯಲ್ಲಿ ಲಕ್ಷಿ$್ಮದೇವಿಯ ವಾಸವಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ, ಗೋಮಯ ಗಣೇಶನನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಇತ್ತೀಚಿನ ದಿನಗಳಲ್ಲಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡುತ್ತಿರುವ ಹಿನ್ನೆಲೆಯಲ್ಲಿ ಗೋಮಯ ಗಣೇಶನ ವಿಗ್ರಹಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಗೊಬ್ಬರವಾಗುವ ಗಣೇಶ! : ಗಣೇಶ ಹಬ್ಬದ ನಂತರ ವಿಸರ್ಜನೆ ಮಾಡಲು ಕೂಡ ತುಂಬ ಸುಲಭ. ಅಲ್ಲದೆ ಯಾವುದೇ ರೀತಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಇದು ನೀರಿಗೆ ಹಾಕಿದ ಕೂಡಲೇ ಕರಗಿ ಹೋಗುತ್ತದೆ. ನಂತರ ಗೊಬ್ಬರವಾಗಿ ಕೂಡ ಪರಿವರ್ತನೆ ಆಗುತ್ತದೆ. ಹಾಗಾಗಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬರುವವರು ಈಗಾಗಲೇ ಗಣಪತಿಯನ್ನು ಬುಕ್​ ಮಾಡಿಕೊಂಡು ಹೋಗಿದ್ದಾರೆ. ಪ್ರಮುಖವಾಗಿ ಯಾವುದೇ ಗಣಪತಿ ಕೊಂಡರೂ, ಅದರ ಪಕ್ಕದಲ್ಲಿ ಸಗಣಿಯಿಂದ ಮಾಡಿದ ಬೆನಕ ಇಡುವುದು ವಾಡಿಕೆ. ಹಾಗಾಗಿ ಸಗಣಿ ಗಣಪನನ್ನೇ ತೆಗೆದುಕೊಂಡು ಹೋದರೆ ಇನ್ನೂ ಅನುಕೂಲ ಎಂಬುದು ಜನರ ನಂಬಿಕೆ.

ಮೂರ್ತಿ ತಯಾರಿ ಹೇಗಿರುತ್ತೆ? : ಗೋಶಾಲೆಯಲ್ಲಿರುವ ನೂರಾರು ಗೋವುಗಳ(ಹಸುಗಳ) ಸಗಣಿ ಒಣಗಿಸಿ ಪುಡಿ ಮಾಡಿದ ನಂತರ, ಗಮ್​ ರೀತಿಯ ವಸ್ತುವನ್ನು ಬಳಸಿ, ಒಂದು ರೀತಿಯ ಮುದ್ದೆ ಆಕಾರದಲ್ಲಿ ತಯಾರಿಸಿ, ಗಣೇಶ ಆಕೃತಿಯ ಅಚ್ಚುಗಳಿಗೆ ಸಗಣಿ ಹಾಕಲಾಗುತ್ತದೆ. ನಂತರ ಕೈಯಿಂದ ಸಂಪೂರ್ಣವಾಗಿ ಅವುಗಳನ್ನು ಆಕಾರ ಮಾಡಿ, ಗಂಜಲದಿಂದ ಲೇಪನ ಮಾಡುತ್ತಾರೆ. ಎರಡು ಮೂರು ದಿನ ಒಣಗಿ ನಂತರ ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣವನ್ನು ಹಾಕುತ್ತಾರೆ. ಹೀಗೆ ಸಂಪೂರ್ಣವಾಗಿ ಸಗಣಿಯಿಂದ ಮಾಡುವ ಗಣಪನಿಗೆ ಬಾರಿ ಬೇಡಿಕೆ ಇದೆ. ಇವುಗಳು ಮನೆಯಲ್ಲಿ ಇಡಲು ತುಂಬಾ ಅನುಕೂಲ. ಅರ್ಧ ಅಡಿಯಿಂದ ಹಿಡಿದು ಒಂದು ಅಡಿಯವರೆಗೆ ಸಗಣಿ ಗಣಪತಿ ಸಿಗುತ್ತವೆ. ಹಣದಲ್ಲೂ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ಗಣಪನ ಬೆಲೆ 300 ರಿಂದ 1 ಸಾವಿರ ರೂಪಾಯಿ ಒಳಗಿರಲಿದೆ. ಹಾಗಾಗಿ ದುಬಾರಿಯೇನಲ್ಲ, ಜತೆಗೆ ಸಾಗಣೆ ಮಾಡಲು ಬಹಳ ಕಡಿಮೆ ತೂಕ.

ಸಗಣಿಯಿಂದ ಗಣೇಶಮೂರ್ತಿ ಮಾಡಲು 15 ರಿಂದ 16 ದಿನಗಳು ತೆಗೆದುಕೊಳ್ಳುತ್ತೇವೆ, ಆನ್​ಲೈನ್​ ಹಾಗೂ ಬೆಂಗಳೂರು ಸುತ್ತಮುತ್ತ ಮಾರ್ಕೆಟಿಂಗ್​ ಮಾಡುತ್ತೇವೆ ಮತ್ತು ರಾಷ್ಟೊ$ತ್ಥಾನ ಗೋಶಾಲೆಗೆ ಬಂದು ಆರ್ಡರ್​ ಮಾಡಿದರೆ ಗಣೇಶನನ್ನು ತಯಾರು ಮಾಡುತ್ತೇವೆ, ನಾವು ತಯಾರು ಮಾಡುತ್ತಿರುವ ಗಣೇಶನಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ. > ಜೀವನ್​ ಕುಮಾರ್​ ಮೇಲ್ವಿಚಾರಕರು ಗೋಶಾಲೆ