ಜಿಲ್ಲೆ

ಹೊಳೆ ಬದಿ ಎಸೆದ ಅವಧಿ ಮೀರಿದ ಆಹಾರ ತಿಂದು 5 ಹಸು ಸಾವು

ಕಾರ್ಕಳ: ತಾಲೂಕಿನ ಜೋಹಲ್ಬೆಟ್ಟು ಹೊಳೆಯ ಬದಿ ಎಸೆದ ಅವಧಿ ಮೀರಿದ ಆಹಾರವನ್ನು ತಿಂದು ಹಸುಗಳು ಮೃತಪಟ್ಟಿದೆ.

ಜೋಹಲ್ಬೆಟ್ಟು ನದಿಯ ಹತ್ತಿರ ಅವಧಿ ಮೀರಿದ ಸುಮಾರು 25 ಗೋಣಿ ಕಡಲೆ ಹಿಟ್ಟನ್ನು ಯಾರೋ ಬಿಸಾಡಿ ಹೋಗಿದ್ದು, ಇದನ್ನು ತಿಂದ ಐದು ಹಸುಗಳು ಸಾವನ್ನಪ್ಪಿದ್ದು 25ರಿಂದ 30 ಹಸುಗಳು ಅಸ್ವಸ್ಥಗೊಂಡಿವೆ.

ಈ ದುರುಳರ ಕೃತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿದ್ದು, ಘಟನೆಗೆ ಸಂಬಂಧಿಸಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು, ಹಿಂದು ಸಂಘಟನೆಯವರು ಆಗ್ರಹಿಸಿದ್ದಾರೆ.