ಮಳವಳ್ಳಿ ತಾಲೂಕಿನ ಚನ್ನೇಗೌನದೊಡ್ಡನದೊಡ್ಡಿ ಮಂಗಳವಾರ ಯೂರಿಯ ತಿಂದು ಮೂರು ಹಸುಗಳು ಸಾವನ್ನಪ್ಪಿವೆ. 
ಜಿಲ್ಲೆ

ಯೂರಿಯಾ ತಿಂದು ಹಸುಗಳು ಸಾವು

ನಾಗೇಶ ಎಸ್

ಮಳವಳ್ಳಿ: ತಾಲೂಕಿನ ಚನ್ನೇಗೌನದೊಡ್ಡನದೊಡ್ಡಿಯಲ್ಲಿ ಮಂಗಳವಾರ ಯೂರಿಯಾ ರಸಗೊಬ್ಬರ ತಿಂದು ಮೂರು ಹಸುಗಳು ಸಾವನ್ನಪ್ಪಿರುವೆ.

ಗ್ರಾಮದ ಸಿದ್ದಲಿಂಗೇಗೌಡರಿಗೆ ಸೇರಿದ ಎರಡು ನಾಟಿ ಹಸು ಹಾಗೂ ದೈತೇಗೌಡನ ಮಹದೇವ ಎಂಬುವರಿಗೆ ಸೇರಿದ ಒಂದು ಸೀಮೆ ಹಸು ಮೃತಪಟ್ಟಿವೆ.

ಎಂದಿನಂತೆ ಮುಂಜಾನೆ ಕೊಟ್ಟಿಗೆಯಿಂದ ಹಸುಗಳನ್ನು ಹೊರಬಿಟ್ಟ ಕೂಡಲೇ ಹಿತ್ತಲಿನಲ್ಲಿ ಒಂದೇ ಕಡೆ ಪಶು ಆಹಾರ ಹಾಗೂ ಯೂರಿಯಾ ಗೊಬ್ಬರವನ್ನು ಇಟ್ಟಿದ್ದರಿಂದ ಪಶು ಆಹಾರ ಎಂದು ಯೂರಿಯಾ ರಸಗೊಬ್ಬರ ತಿಂದಿವೆ. ಮನೆಯವರು ಹೊರಬಂದು ನೋಡುವಷ್ಟರಲ್ಲಿ ಎರಡು ನಾಟಿ ತಳಿ ಹಸು ಹಾಗೂ ಒಂದು ಸೀಮೆ ಹಸು ಸಾವನ್ನಪ್ಪಿವೆ. ಸ್ಥಳಕ್ಕೆ ಆಗಮಿಸಿದ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಮೃತ ಹಸುಗಳ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ನೀಡಿದ್ದಾರೆ.