ಜಿಲ್ಲೆ

ಮತ್ತೆ ಹೊಸದಾಗಿ ಒಂಬತ್ತು COVID19 ಪ್ರಕರಣ ಖಚಿತವಾಯಿತು: ಎಂಟು ಪ್ರಕರಣ ಕಲಬುರಗಿಯಲ್ಲೇ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ತನಕದ ಅವಧಿಯ ನಡುವೆ ಮತ್ತೆ ಹೊಸದಾಗಿ ಮತ್ತೆ ಒಂಬತ್ತು COVID19 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಎಂಟು ಪ್ರಕರಣ ಕಲಬುರಗಿಯಲ್ಲೇ ದೃಢಪಟ್ಟಿರುವುದು. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ.

ಸಂಚಿತ 532 ಪ್ರಕರಣಗಳ ಪೈಕಿ 215 ಸೋಂಕು ಪೀಡಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದೇ ವೇಳೆ ಮರಣ ಪ್ರಮಾಣ 20 ಆಗಿದೆ. ಈ ಪೈಕಿ ಒಂದು ಕೋವಿಡ್​ 19 ಯೇತರ ಕಾರಣಕ್ಕೆ ಸಾವು ಸಂಭವಿಸಿದೆ.

ಕಲಬುರಗಿಯಲ್ಲೇ ಎಂಟು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ನಾಲ್ಕು P425 ರ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡವರು. ಎಲ್ಲರೂ ಹೆಣ್ಮಕ್ಕಳು. ಎರಡು ಪ್ರಕರಣ P 205ರ ಸಂಪರ್ಕದಿಂದ ಸೋಂಕು ತಗುಲಿಸಿಕೊಂಡವರಾದರೆ, ಇನ್ನೆರಡು ಪ್ರಕರಣದಲ್ಲಿ ಒಂದು P515 ಮತ್ತು P 395ರ ಪ್ರಕರಣದ ಸಂಪರ್ಕದಲ್ಲಿ ಸೋಂಕು ಪೀಡಿತರಾದವರು. ಇನ್ನುಳಿದಂತೆ ಒಂದು ಪ್ರಕರಣ ಬೆಳಗಾವಿ ಜಿಲ್ಲೆ ಹುಕ್ಕೇರಿಯದ್ದು. ಅಲ್ಲಿ P293ರ ಸಂಪರ್ಕ ಸೋಂಕಿಗೆ ಕಾರಣ.