ಉಡುಪಿ: ಕೋವಿಡ್ ನಿಯಮ ಪಾಲಿಸದವರಿಗೆ ದಂಡ ವಿಧಿಸುವ ನಿಯಮ ಜಾರಿಯಲ್ಲಿದ್ದು, ಉಡುಪಿ ಜಿಲ್ಲೆಯಲ್ಲಿ ಒಂದು ವರ್ಷ ಅವಧಿಯಲ್ಲಿ (ಏ.10ರವರೆಗೆ) 26,551 ಮಂದಿಯಿಂದ 28.31 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ. ಪೊಲೀಸ್ ಇಲಾಖೆ ಗರಿಷ್ಠ ಹಾಗೂ ಸಾರಿಗೆ ಇಲಾಖೆ ಕನಿಷ್ಠ ದಂಡ ವಸೂತಿ ಮಾಡಿದೆ.
ಪೊಲೀಸರು ಸಾರ್ವಜನಿಕ ಪ್ರದೇಶಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ 16,124 ಮಂದಿಯಿಂದ 17,66,950 ರೂ., ಮೀನುಗಾರಿಕಾ ಇಲಾಖೆ 51 ಮಂದಿಯಿಂದ 5,100 ರೂ, ಪ್ರವಾಸೋದ್ಯಮ ಇಲಾಖೆ 69 ಮಂದಿಯಿಂದ 6,900 ರೂ, ಅಬಕಾರಿ ಇಲಾಖೆ 1,234 ಮಂದಿಯಿಂದ 1,23,400 ರೂ, ಕಂದಾಯ ಇಲಾಖೆ 968 ಮಂದಿಯಿಂದ 9,7300 ರೂ, ಸಾರಿಗೆ ಇಲಾಖೆ 8 ಮಂದಿಯಿಂದ 800 ರೂ.ದಂಡ ವಸೂಲಿ ಮಾಡಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ 4.47 ಲಕ್ಷ ರೂ
ಗ್ರಾಮ ಪಂಚಾಯಿತಿ ವ್ಯಾಪ್ತಿ ಒಂದು ವರ್ಷದಲ್ಲಿ 4,47,000 ರೂ.ದಂಡ ಸಂಗ್ರಹವಾಗಿದೆ. ಉಡುಪಿ ತಾಲೂಕಿನಲ್ಲಿ 453 ಪ್ರಕರಣಗಳಲ್ಲಿ 46,100 ರೂ, ಕಾರ್ಕಳ ತಾಲೂಕಿನಲ್ಲಿ 940 ಪ್ರಕರಣಗಳಲ್ಲಿ 93,300 ರೂ., ಕುಂದಾಪುರ ತಾಲೂಕಿನಲ್ಲಿ 799 ಪ್ರಕರಣಗಳಲ್ಲಿ 80,300 ರೂ., ಕಾಪುವಿನಲ್ಲಿ 360 ಪ್ರಕರಣಗಳಲ್ಲಿ 36,400 ರೂ., ಬ್ರಹ್ಮಾವರ ತಾಲೂಕಿನಲ್ಲಿ 521 ಪ್ರಕರಣಗಳಲ್ಲಿ 52,500 ರೂ., ಹೆಬ್ರಿ ತಾಲೂಕಿನಲ್ಲಿ 271 ಪ್ರಕರಣಗಳಲ್ಲಿ 27,500 ರೂ., ಬೈಂದೂರು ತಾಲೂಕಿನಲ್ಲಿ 1091 ಪ್ರಕರಣಗಳಲ್ಲಿ 1,10,900 ರೂ.ದಂಡ ವಸೂಲಿ ಮಾಡಲಾಗಿದೆ.
ನಗರದಲ್ಲಿ 3,662 ಪ್ರಕರಣ
ಜಿಲ್ಲೆಯಲ್ಲಿ ಐದು ನಗರ ಸ್ಥಳೀಯಾಡಳಿತ ಸಂಸ್ಥೆಗಳಿದ್ದು, ಒಟ್ಟು 3,662 ಪ್ರಕರಣಗಳಲ್ಲಿ 38,4050 ರೂ. ದಂಡ ವಸೂಲಿ ಮಾಡಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯ 1543 ಪ್ರಕರಣಗಳಲ್ಲಿ 1,71,300 ರೂ, ಕಾರ್ಕಳ ಪುರಸಭೆಯ 348 ಪ್ರಕರಣದಲ್ಲಿ 3,4750 ರೂ, ಕುಂದಾಪುರದ 664 ಪ್ರಕರಣಗಳಲ್ಲಿ 66,500 ರೂ, ಕಾಪು 534 ಪ್ರಕರಣಗಳಲ್ಲಿ 54,600 ರೂ, ಸಾಲಿಗ್ರಾಮ ಪಪಂ. 364 ಪ್ರಕರಣಗಳಲ್ಲಿ 36,400 ರೂ.ಹಾಗೂ ಬೈಂದೂರು ಪಪಂ ವ್ಯಾಪ್ತಿಯ 205 ಪ್ರಕರಣಗಳಲ್ಲಿ 20,500 ರೂ. ದಂಡ ಸಂಗ್ರಹಿಸಲಾಗಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಂದ ವಸೂಲಿ ಮಾಡಲಾದ ದಂಡ ಮೊತ್ತವನ್ನು ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಲಾಗುತ್ತದೆ. ಶಾಲೆ, ಕಾಲೇಜು ಕ್ಯಾಂಪಸ್ ಪರಿಶೀಲನೆಗೆ ತಂಡ ರಚಿಸಲಾಗಿದೆ. ಕೋವಿಡ್ ನಿಯಮ ಪಾಲಿಸದ ಅಂಗಡಿ, ಸಂಘ ಸಂಸ್ಥೆಗಳ ಪರವಾನಗಿ ರದ್ದು ಮಾಡಲಾಗುವುದು.
ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ