ಜಿಲ್ಲೆ

ಶಬರಿಮಲೆ ಮೂವರು ಅರ್ಚಕರಿಗೆ ಕರೊನಾ

Dakshina Kannada

ಕಾಸರಗೋಡು: ಶಬರಿಮಲೆಯ ಮೂವರು ಅರ್ಚಕರಿಗೆ ಕರೊನಾ ದೃಢಪಟ್ಟಿದೆ. ಉಳಿದಂತೆ ಮುಖ್ಯ ಅರ್ಚಕರ ಸಹಿತ ಏಳು ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ನಿತ್ಯಪೂಜೆಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ವಂ ಬೋರ್ಡ್ ಪ್ರಕಟಣೆ ತಿಳಿಸಿದೆ.

ಮಕರ ಜ್ಯೋತಿ ಹಿನ್ನೆಲೆಯಲ್ಲಿ ಸನ್ನಿಧಾನ ಮತ್ತು ನೀಲಕ್ಕಲ್ ಒಳಗೊಂಡ ಪ್ರದೇಶವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸುವಂತೆ ಆರೋಗ್ಯಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.