ಜಿಲ್ಲೆ

ಕೋವಿಡ್ ಸಾವಿನಲ್ಲಿ ರಾಜ್ಯಕ್ಕೆ 17ನೇ ಸ್ಥಾನ : ಒಟ್ಟು ಕರೊನಾ ಪ್ರಕರಣದಲ್ಲಿ ಶೇ.1.3 ಸಾವು

ಬೆಂಗಳೂರು : ದೇಶದಲ್ಲಿ ಒಂದು ಕೋಟಿಗೂ ಅಧಿಕ ಕೋವಿಡ್ ಪರೀಕ್ಷೆ ನಡೆಸಿದ 6 ರಾಜ್ಯಗಳ ಪೈಕಿ, ಸಾವಿನ ಪ್ರಮಾಣದಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದ್ದು, ದೇಶದ 28 ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ 17ನೇ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಕರೊನಾ ಸಾವಿನ ಪ್ರಮಾಣ ಇಳಿಮುಖವಾಗಿದ್ದು, ಶೇ.1.32 ಪ್ರಮಾಣದಲ್ಲಿ ಮುಂದುವರೆಯುತ್ತಿದೆ. ಆದರೆ, ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕಂಡುಬರುತ್ತಿರುವ ಖಚಿತ ಪ್ರಕರಣಕ್ಕೆ ಹೋಲಿಕೆ ಮಾಡಿದಲ್ಲಿ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿದೆ.

ಬೆಂಗಳೂರಿನಲ್ಲಿ ಕಳೆದೆರಡು ತಿಂಗಳಿಂದ ಸೋಂಕಿತ ಪತ್ತೆಯಾದಲ್ಲಿ ಆತನ ಸಂಪರ್ಕದ ಸುಮಾರು 10 ರಿಂದ 50 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜತೆಗೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಮೊಬೈಲ್ ಘಟಕಗಳ ಮೂಲಕ ಮಾರುಕಟ್ಟೆ, ಹೋಟೆಲ್, ಶಾಪಿಂಗ್ ಮಾಲ್‌ಗಳು, ಕಾಲೇಜುಗಳು ಹಾಗೂ ಎಲ್ಲ ಜನಸಂದಣಿ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ, ರಾಜಧಾನಿಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿದೆ. ಆದರೆ, ಧಾರವಾಡ, ಬೀದರ್, ದಕ್ಷಿಣ ಕನ್ನಡ, ಕೊಪ್ಪಳ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇ.2ಕ್ಕಿಂತ ಅಧಿಕವಾಗಿದೆ.

ದೇಶದಲ್ಲಿ ಹೆಚ್ಚು ಕೋವಿಡ್ ಸಾವಿನ ಪ್ರಮಾಣ ಹೊಂದಿದ ರಾಜ್ಯಗಳು
ರಾಜ್ಯಗಳು               ಸ್ಥಾನ       ಸಾವು (ಶೇ.ಪ್ರಮಾಣ)
ಪಂಜಾಬ್                1ನೇ       3.2
ಮಹಾರಾಷ್ಟ್ರ              2ನೇ       2.6
ಸಿಕ್ಕಿಂ                    3ನೇ       2. 1
ಗುಜರಾತ್                4ನೇ       1.9
ಕರ್ನಾಟಕ                17ನೇ      1.3
ಅರುಣಾಚಲ ಪ್ರದೇಶ      27ನೇ      0.3
ಮಿಜೋರಾಂ             28ನೇ       0.2