ಮಂಗಳೂರು/ಉಡುಪಿ: ದ.ಕ. ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಸಾವು ಹೆಚ್ಚುತ್ತಿದ್ದು, ಬುಧವಾರದ ವರದಿಯನ್ವಯ 11 ಮಂದಿ (ಮಂಗಳೂರಿನವರು 9, ಬಂಟ್ವಾಳ, ಪುತ್ತೂರಿನಿಂದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಮರಣ ಸಂಖ್ಯೆ 882ಕ್ಕೇರಿದೆ.
ಒಟ್ಟು 729 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಒಟ್ಟು ಪಾಸಿಟಿವ್ ಬಂದವರ ಸಂಖ್ಯೆ 72,544ಕ್ಕೇರಿದೆ. 10099 ಸಕ್ರಿಯ ಪ್ರಕರಣಗಳಿವೆ. 756 ಮಂದಿ ಬುಧವಾರ ಸೋಂಕು ಮುಕ್ತರಾಗಿದ್ದು, ಡಿಸ್‌ಚಾರ್ಜ್ ಆದವರ ಸಂಖ್ಯೆ 61561 ತಲುಪಿದೆ.
ಮಂಗಳೂರಿನಲ್ಲಿ 4, ಬಂಟ್ವಾಳದಲ್ಲಿ 1 ಸೇರಿದಂತೆ ಬುಧವಾರ 5 ಕಂಟೇನ್ಮೆಂಟ್ ವಲಯ ರಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ 973 ಮಂದಿಗೆ ಕರೊನಾ ದೃಢಪಟ್ಟಿದೆ. ಉಡುಪಿಯ ಮೂವರು, ಕುಂದಾಪುರದ ಓರ್ವ ಸಹಿತ ಐವರು ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 353 ಮಂದಿ ಉಡುಪಿ, 340 ಮಂದಿ ಕುಂದಾಪುರ, 273 ಮಂದಿ ಕಾರ್ಕಳ ತಾಲೂಕಿನವರು. 7 ಮಂದಿ ಹೊರ ಜಿಲ್ಲೆಯವರು. 695 ಮಂದಿ ಗುಣವಾಗಿದ್ದಾರೆ. 5792 ಸಕ್ರಿಯ ಪ್ರಕರಣಗಳಿವೆ.
ಮತ್ತೆರಡು ಮಂದಿಗೆ ಬ್ಲಾಕ್ ಫಂಗಸ್: ಬ್ಲಾಕ್ ಫಂಗಸ್ ಪ್ರಕರಣ ದ.ಕ. ಜಿಲ್ಲೆಯಲ್ಲಿ 25ಕ್ಕೆ ಏರಿಕೆಯಾಗಿದೆ. ಬುಧವಾರ ತಲಾ ಒಂದು ಪ್ರಕರಣ ವೆನ್ಲಾಕ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸದ್ಯ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 13 ಪ್ರಕರಣ ಕಂಡುಬಂದಿದೆ. ಉಡುಪಿಯಲ್ಲಿ 2, ಕುಂದಾಪುರದಲ್ಲಿ 2 ಹಾಗೂ ಹೊರಜಿಲ್ಲೆಯ 9 ಮಂದಿಯಲ್ಲಿ ರೋಗ ದೃಢಪಟ್ಟಿದೆ. ಓರ್ವ ಮೃತಪಟ್ಟಿದ್ದಾರೆ.