ಜಿಲ್ಲೆ

ದ.ಕ. 112, ಉಡುಪಿ 89 ಮಂದಿ ಪಾಸಿಟಿವ್

Dakshina Kannada

ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಬುಧವಾರ 112 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

73 ಮಂದಿ ಗುಣ ಹೊಂದಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. 718 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಪಾಸಿಟಿವ್ ಆದವರ ಸಂಖ್ಯೆ 36,255ಕ್ಕೆ ಏರಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ 89 ಮಂದಿಗೆ ಕರೊನಾ ದೃಢಪಟ್ಟಿದೆ.

ಸೋಂಕಿತರಲ್ಲಿ 40 ಮಂದಿ ಉಡುಪಿ, 38 ಮಂದಿ ಕುಂದಾಪುರ, 10 ಮಂದಿ ಕಾರ್ಕಳ ತಾಲೂಕು ಹಾಗೂ ಓರ್ವ ಹೊರ ಜಿಲ್ಲೆಯವರು. 11 ಮಂದಿ ಕೋವಿಡ್ ಅಸ್ಪತ್ರೆ ಹಾಗೂ 78 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 59 ಮಂದಿ ಗುಣವಾಗಿದ್ದಾರೆ. ಪ್ರಸ್ತುತ 428 ಸಕ್ರಿಯ ಪ್ರಕರಣಗಳಿವೆ.