ಬೆಂಗಳೂರು: ರಾಜ್ಯದಲ್ಲಿ ಕರೊನಾ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಇಂದು 267 ಆಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4063ಕ್ಕೆ ಏರಿಕೆಯಾಗಿದೆ. ಇದು ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ರ ನಡುವಿನ ಡೇಟಾ ಆಗಿದ್ದು, ಈ ಅವಧಿಯಲ್ಲಿ ಒಬ್ಬ ಸೋಂಕು ಪೀಡಿತ ಮೃತಪಟ್ಟಿದ್ದು ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಇದರಲ್ಲಿ ಎರಡು ಕೇಸ್ಗಳಲ್ಲಿ ಅನ್ಯಕಾರಣಗಳಿಗೆ ಸಾವು ಸಂಭವಿಸಿದೆ. ನಿನ್ನೆ 410 ಕೇಸ್ಗಳೊಂದಿಗೆ ಅಗ್ರಸ್ಥಾನ ತಲುಪಿದ್ದ ಉಡುಪಿಯನ್ನು ಇಂದು ಮತ್ತೆ ಕಲಬುರಗಿ ಹಿಂದಿಕ್ಕಿದ್ದು ನಂ.1 ಪಟ್ಟಕ್ಕೇರಿದೆ.

ರಾಜ್ಯದಲ್ಲಿ ಸದ್ಯ ಸಕ್ರಿಯವಾಗಿರುವ ಕೋವಿಡ್ 19 ಪ್ರಕರಣಗಳ ಸಂಖ್ಯೆ 2494. ಐಸಿಯುನಲ್ಲಿ 16 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 267 ಪ್ರಕರಣಗಳ ಪೈಕಿ 250 ಅನ್ಯರಾಜ್ಯಗಳಿಂದ ಆಗಮಿಸಿದವರ ಕೇಸ್ಗಳು. ಇದೇ ಅವಧಿಯಲ್ಲಿ 111 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ ಒಟ್ಟು 1,514 ಜನ ಸೋಂಕುಮುಕ್ತರಾಗಿದ್ದಾರೆ.
ಜಿಲ್ಲಾವಾರು ಅಂಕಿ ಅಂಶ ನೋಡಿದಾಗ ನಿನ್ನೆ ನಂ. 1 ಸ್ಥಾನಕ್ಕೇರಿದ ಉಡುಪಿ ಇಂದು ಎರಡನೇ ಸ್ಥಾನಕ್ಕೆ ಕುಸಿದಿದೆ. ಕಲಬುರಗಿ ಮತ್ತೆ ನಂ.1 ಸ್ಥಾನಕ್ಕೇರಿದೆ. ಇಂದು ಕಲುಬರಗಿಯಲ್ಲಿ 100 ಕೇಸ್, ಉಡುಪಿಯಲ್ಲಿ 62, ರಾಯಚೂರು 35, ಬೆಂಗಳೂರು ನಗರ 20, ಮಂಡ್ಯ 13 ಕೇಸ್ಗಳು ದೃಢಪಟ್ಟಿವೆ. ಕಲಬುರಗಿಯಲ್ಲಿ ಒಟ್ಟು 510 ಕೇಸ್ಗಳಾದರೆ ಉಡುಪಿಯಲ್ಲಿ 472, ಬೆಂಗಳೂರು ನಗರದಲ್ಲಿ 417, ಮಂಡ್ಯ 302, ಯಾದಗಿರಿ 299 ಕೇಸ್ಗಳೊಂದಿಗೆ ಮೊದಲ ಐದು ಸ್ಥಾನದಲ್ಲಿವೆ. ವಿವರವಾದ ಮಾಹಿತಿಗೆ ಕೆಳಗೆ ಗ್ಯಾಲರಿಯಲ್ಲಿರುವ ಕೋವಿಡ್ 19 ಸ್ಥಿತಿಗತಿ ವರದಿ ಗಮನಿಸಿ..