ಜಿಲ್ಲೆ

ಕಾವೇರಿ ವಿಚಾರದಲ್ಲಿ ಸಮರ್ಥ ವಾದ ಮಂಡಿಸಲು ರಾಜ್ಯ ಸರ್ಕಾರ ವಿಫಲ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕರ್ನಾಟಕ ತಮಿಳ್ನಾಡು ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ ಮುಂದೆ ಸಮರ್ಥ ವಾದ ಮಂಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದ ನೀರಿನ ಬೇಡಿಕೆ ಮತ್ತು ತಮಿಳುನಾಡಿನ ಹೆಚ್ಚುವರಿ ಬೇಡಿಕೆ ಬಗ್ಗೆ ಯಾವುದೇ ವೈಜ್ಞಾನಿಕ ವರದಿ ತಯಾರಿಸಿಲ್ಲ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ತಾಲೂಕಲ್ಲಿ ಬರಗಾಲ ಇದೆ. ವಾಡಿಕೆ ಮಳೆಯಾಗಿಲ್ಲ. ಕಾವೇರಿ, ಕಬಿನಿ ಡ್ಯಾಮ್​ ಗಳಲ್ಲಿ ನೀರಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಅರ್ಧದಷ್ಟು ನೀರಿಲ್ಲ. ಬೆಂಗಳೂರಿಗೆ ಕುಡಿಯಲು 35 ಟಿಎಂಸಿ ನೀರುಬೇಕು. ಇಂದಿನ ಬೆಂಗಳೂರಿನ ಜನಸಂಖ್ಯೆ ಗೆ ಆಧಾರಿತವಾಗಿ ನೀರಿನ ಲೆಕ್ಕಾಚಾರ ಮಾಡಿಲ್ಲ. ಡ್ಯಾಂನಲ್ಲಿರುವ ಹೂಳಿನ ಬಗ್ಗೆ ವರದಿಯೂ ಇಲ್ಲ. ಅದರೆ ತಮಿಳುನಾಡಿನಲ್ಲಿ ನಿಯಮ ಮೀರಿ 10 ಪಟ್ಟು ಹೆಚ್ಚು ಬೇಸಾಯ ಮಾಡುತ್ತಿದ್ದಾರೆ. ತಮಿಳುನಾಡಿನ ಬೇಸಾಯಕ್ಕೆ ನೀರು ಹರಿಸೋದು ಕ್ರಿಮಿನಲ್​ ಅಪರಾಧ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ವೈಜ್ಞಾನಿಕ ವರದಿ ತಯಾರಿಸದೇ ಇರುವುದರಿಂದ ತಮಿಳ್ನಾಡು ಸರ್ಕಾರಕ್ಕೆ ಗೆಲುವಾಗುತ್ತಿದೆ ಎಂದರು.

ಅಧಿಕೃತ ವರದಿ ಪಡೆಯದೆ 15 ಸಾವಿರ ಕ್ಯೂ ಸೆಕ್ಸ್​ ನೀರು ತಮಿಳುನಾಡಿಗೆ ಸರ್ಕಾರ ಬಿಟ್ಟಿದೆ. ವಿಪಕ್ಷ, ಸಂಘಟನೆಗಳ ಜೊತೆ ಚರ್ಚೆ ಮಾಡಿಲ್ಲ. ಯಾವ ಹೆದರಿಕೆಯಿಂದ ತಮಿಳ್ನಾಡಿಗೆ ನೀರು ಬಿಡ್ತಿದ್ದೀರೋ ಗೊತ್ತಿಲ್ಲ. ಕಾಂಗ್ರೆಸ್​ ನೀರು ಹರಿಸಿದ ಮೇಲೆ ಮೀಟಿಂಗ್​ ಮಾಡಿ ಡೆಲ್ಲಿಗೆ ಬಂದಿದ್ದರು. ಕೇಂದ್ರದ ಟೀಂ ಬಂದು ವರದಿ ಮಾಡಲು ಬೇಡಿಕೆ ಇಟ್ಟಿದ್ದೇವೆ. ಎರಡು ರಾಜ್ಯದ ವಸ್ತುಸ್ಥಿತಿ ಕೇಂದ್ರದ ತಂಡ ವೈಜ್ಞಾನಿಕ ಅಧ್ಯಯನ ಮಾಡುತ್ತದೆ. ತಮಿಳ್ನಾಡು ಅನಾವಶ್ಯಕ ಹೆಚ್ಚು ಬೇಸಾಯ ಮಾಡಿ ನೀರಿಲ್ಲ ಎನ್ನುತ್ತಿದೆ. ಕಳೆದ ಬಾರಿ ತಮಿಳ್ನಾಡಿಗೆ 600 ಟಿಎಂಸಿ ನೀರು ಕಳುಹಿಸಲಾಗಿದೆ. ಡಿಎಂಕೆ ಕಾಂಗ್ರೆಸ್​ನ ಐಎನ್​ಐಡಿ ಒಕ್ಕೂಟದಲ್ಲಿಯೇ ಇರುವುದರಿಂದ ಕಾನೂನು ಹೊರತಾಗಿ ಫ್ರೆಂಡ್ಲಿ ರಿಕ್ವೆಸ್ಟ್​ ಕೂಡ ಮಾಡಬಹುದು ಎಂದರು.