ಕೊಟ್ಟೂರನಲ್ಲಿ ಶಾಸಕ ನೇಮಿರಾಜ ನಾಯ್ಕ ಕವರ್ಡ್‌ ಇನ್ಸುಲೆಟೆಡ್ ವೈರ್ ಅಳವಡಿಕೆಗೆ ಚಾಲನೆ ನೀಡಿದರು. ಜೆಸ್ಕಾಂ ಇಲಾಖೆ ಎಇಇ ನಾಗರಾಜ, ಜೆಡಿಎಸ್ ಮುಖಂಡ ಎಂ.ಎಂ.ಜೆ. ಶೋಬಿತ್, ಜೆಸ್ಕಾಂ ಕಿರಿಯ ಇಂಜಿನಿಯರ್ ಎಸ್. ಚೇತನ್ ಕುಮಾರ್, ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜನ ಮತ್ತಿತರರಿದ್ದರು. 
ಜಿಲ್ಲೆ

ಕವರ್ಡ್‌ ಇನ್ಸುಲೆಟೆಡ್ ವೈರ್‌ಗಳ ಜೋಡಣೆ

ರುದ್ರಪ್ಪ ವಾಲಿ

ಕೊಟ್ಟೂರು: ಪಟ್ಟಣದ ವಿದ್ಯುತ್ ಕಂಬದ ಹಳೇ ವೈರ್‌ಗಳನ್ನು ಬದಲಾಯಿಸಿ ಕವರ್ಡ್‌ ಇನ್ಸುಲೆಟೆಡ್ ವೈರ್ ಅಳವಡಿಕೆ 85ಲಕ್ಷ ರೂ. ಯೋಜನೆಗೆ ಶನಿವಾರ ಶಾಸಕ ನೇಮಿರಾಜ ನಾಯ್ಕ ಚಾಲನೆ ನೀಡಿದರು.

ಮೊದಲ ಹಂತದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದಿಂದ ಅಂಬಣ್ಣ ಪಾಳರದ ಅಂಗಡಿ ಮತ್ತು ಗಾಂಧಿ ಪ್ರತಿಮೆಯಿಂದ ಹಳೇ ನಾಡಕಚೇರಿ ತನಕ ಈ ಇನ್ಸುಲೆಟೆಡ್ ವೈರ್‌ಗಳನ್ನು ಅಳವಡಿಸಲಾಗುವುದು. ನಂತರದ ದಿನಗಳಲ್ಲಿ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಸಂಪೂರ್ಣವಾಗಿ ಹಳೇ ವೈರ್‌ಗಳನ್ನು ತೆಗೆದುಹಾಕಿ ಕವರ್ಡ್‌ ಇನ್ಸುಲೆಟೆಡ್ ವೈರ್‌ಗಳನ್ನು ಅಳವಡಿಸಲಾಗುವುದು.

ರಥೋತ್ಸವ ಸಂದರ್ಭದಲ್ಲಿ ವಿದ್ಯುತ್ ತಂತಿ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿತ್ತು. ಕವರ್ಡ್‌ ಇನ್ಸುಲೆಟೆಡ್ ವೈರ್ ಅಳವಡಿಸುವುದರಿಂದ ಈ ಸಮಸ್ಯೆ ಉದ್ಬವಿಸುವುದಿಲ್ಲ. ಈ ವೈರ್‌ಗಳನ್ನು ಮುಟ್ಟಿದರೂ ಯಾವುದೇ ಅಪಾಯವಿಲ್ಲ.

ವೈರ್ ಹರಿದು ನೆಲಕ್ಕೆ ಬಿದ್ದರೂ ಅಪಾಯವಿಲ್ಲ. ಪಟ್ಟಣದಲ್ಲಿನ ಎಲ್ಲ ಕಬ್ಬಿಣದ ಮತ್ತು ಡ್ಯಾಮೇಜ್ ಆಗಿರುವ ವಿದ್ಯುತ್ ಕಂಬಗಳನ್ನು ತೆಗೆದುಹಾಕಿ. ಆ ಸ್ಥಳದಲ್ಲಿ 9ಮೀಟರ್ ಎತ್ತರದ ಆರ್.ಸಿ.ಸಿ. ವಿದ್ಯುತ್ ಕಂಬಗಳನ್ನು ನೆಡಲಾಗುವುದು. ಕೇಂದ್ರ ಸರ್ಕಾರದ ಸೂರ್ಯಘರ್ ಮ್ತು ಬಿಜಲಿ ಯೋಜನೆ ಅನ್ವಯ ತಮ್ಮ ಮನೆ ಮೇಲೆ ಸೋಲಾರ್ ರೂಫ್ ಟಾಪ್ ಸಿಸ್ಟಮ್‌ಗಳನ್ನು ಅಳವಡಿಸಿಕೊಂಡು ಉಚಿತ ವಿದ್ಯತ್ ಪಡೆದು ಹೆಚ್ಚುವರಿ ವಿದ್ಯುತ್‌ಮಾರಾಟ ಮಾಡಬಹುದು ಎಂದರು.

ಕ್ಷೇತ್ರದ 17 ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ.50 ಅನುದಾನ ಕೊಡಿಸುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರ್ ಸ್ವಾಮಿ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಶೇ.50 ಕೊಡಬೇಕಾಗಿದೆ. ಈ ಕುರಿತು ರಾಜ್ಯ ನೀರಾವರಿ ಸಚಿವರೊಂದಿಗೆ ಮಾತನಾಡುತ್ತೇನೆ. ಕೊಟೂರು ಕೆರೆ ತುಂಬಿರುವುದು ಅತ್ಯಂತ ಸಂತಸದ ಸಂಗತಿ, ಮಂಗಳವಾರ ಬಾಗೀನ ಅರ್ಪಿಸಲಾಗುವುದು ಎಂದು ಶಾಸಕ ನೇಮಿರಾಜ ನಾಯ್ಕ ಹೇಳಿದರು.

ಎಂ.ಎಂ.ಜೆ. ಹರ್ಷವರ್ದನ್, ಪಪಂ ಸದಸ್ಯ ಬಾವಿಕಟ್ಟಿ ಶಿವಾನಂದ, ತಿಮ್ಮಲಾಪುರದ ಕೊಟ್ರೇಶ, ಜೆಸ್ಕಾಂ ಕಿರಿಯ ಇಂಜಿನಿಯರ್ ಎಸ್. ಚೇತನ್ ಕುಮಾರ್ ಇತರರಿದ್ದರು.