ಜಿಲ್ಲೆ

ಎರಡು ಕ್ಷೇತ್ರದ ಎಣಿಕೆಗೆ ಕೋರ್ಟ್ ತಡೆಯಾಜ್ಞೆ

ಬಸವರಾಜ ವೀರಪ್ಪ ಗರಗ

ಲಕ್ಷೆ್ಮೕಶ್ವರ: ತಾಲೂಕಿನ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ಗೆ (ಪಿಕಾರ್ಡ್ ಬ್ಯಾಂಕ್) ಭಾನುವಾರ ಜರುಗಿದ ವಿವಿಧ ಕ್ಷೇತ್ರಗಳ ಚುನಾವಣೆಯಲ್ಲಿ ಬಿನ್​ಸಾಲಗಾರ ಕ್ಷೇತ್ರದಿಂದ ವಿನೋದ ರೆಡ್ಡಿ (ಬಾಬು) ಅಳವಂಡಿ ಭರ್ಜರಿ ಜಯ ಸಾಧಿಸಿದ್ದು, ಉಳಿದ ಎರಡು ಕ್ಷೇತ್ರಗಳ ಮತ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಬಿನ್ ಸಾಲಗಾರ ಮತಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಭಾನುವಾರ ಮತದಾನ ಮುಗಿದಾಗ ಒಟ್ಟು 94 ಮತ ಚಲಾವಣೆಗೊಂಡಿದ್ದವು. ಎಣಿಕೆಯಲ್ಲಿ 94 ಮತಗಳಲ್ಲಿ 93 ಮತಗಳನ್ನು ವಿನೋದರೆಡ್ಡಿ ಜಯಭೇರಿ ಸಾಧಿಸಿದರು.

ಈ ಬ್ಯಾಂಕ್ ಒಟ್ಟು 15 ಜನ ಸದಸ್ಯರನ್ನು ಹೊಂದಿದ್ದು, ಅದರಲ್ಲಿ 10 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಒಂದು ಕ್ಷೇತ್ರಕ್ಕೆ ಮತದಾನ ನಡೆಯಲಿಲ್ಲ. ಎರಡು ಕ್ಷೇತ್ರಗಳಿಗೆ ಮತದಾನ ನಡೆದರೂ ಎಣಿಕೆಗೆ ತಡೆಯಾಜ್ಞೆ ನೀಡಲಾಗಿದೆ.

ಕೋರ್ಟ್ ಆದೇಶದ ನಂತರವೇ ಮತಎಣಿಕೆ ಮಾಡಲಾಗುವುದು. ಗೊಜನೂರ ಸಾಲಗಾರ ಕ್ಷೇತ್ರದಲ್ಲಿ ಎಸ್ಸಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ನಡೆದಿಲ್ಲ ಎಂದು ಚುನಾವಣಾಧಿಕಾರಿ ನಿಡಗುಂದಿಮಠ ತಿಳಿಸಿದ್ದಾರೆ.

ಜಿ.ವಿ. ಪಾಟೀಲ, ರಾಜು ಪಾಟೀಲ, ಪದ್ಮರಾಜ ಪಾಟೀಲ, ಚನ್ನಪ್ಪ ಜಗಲಿ, ಅಮರೇಶ ತೆಂಬದಮನಿ, ನಾಗರಾಜ ಮಡಿವಾಳರ, ಬಸಣ್ಣ ಹೊಳಲಾಪೂರ, ಮುಕ್ತಿಯಾರ ಗದಗ, ಗಂಗಾಧರ ಮ್ಯಾಗೇರಿ, ಅಣ್ಣಪ್ಪ ರಾಮಗೇರಿ, ರಾಜು ಓಲೇಕಾರ, ಶರಣು ಗೋಡಿ, ಶಿವಾನಂದ ಲಿಂಗಶೆಟ್ಟಿ, ಮಂಜಪ್ಪ ಶೆರಸೂರಿ, ಮುದಕಪ್ಪ ಗೊಜಗೊಜಿ, ನೀಲಪ್ಪ ಶರಸೂರಿ, ರಮೇಶ ತೊರಗಲ್ಲ, ಕಿರಣ ನವಲೆ, ದಾದಾಪೀರ ತಂಬಾಕದ, ಇತರರಿದ್ದರು.