ಜಿಲ್ಲೆ

ಕಲಾಪ ಬಹಿಷ್ಕರಿಸಿದ ವಕೀಲರು

ಕೊಪ್ಪಳ: ಗಂಗಾವತಿ ಹೆಚ್ಚುವರಿ ನ್ಯಾಯಾಲಯಕ್ಕೆ ವಿಶೇಷ ಪ್ರಕರಣಗಳ ಅಧಿಕಾರ ನೀಡಿದ್ದನ್ನು ಖಂಡಿಸಿ ಕೊಪ್ಪಳ ವಕೀಲರು ಬುಧವಾರ ಕಲಾಪ ಬಹಿಷ್ಕರಿಸಿದರು.

ಗಂಗಾವತಿ ಹೆಚ್ಚುವರಿ ಜಿಲ್ಲಾ ಕೋರ್ಟ್​ಗೆ ಪೋಕ್ಸೋ, ಜಾತಿ ನಿಂದನೆ, ಭ್ರಷ್ಟಾಚಾರ, ಮಧ್ಯಸ್ಥಿಕೆ, ಗಣಿ ಸಂಬಂಧಿ ಪ್ರಕರಣಗಳು, ಎನ್​ಡಿಪಿಎಸ್​ ಪ್ರಕರಣ ವಿಚಾರಣೆ ಅಧಿಕಾರ ನೀಡಲಾಗಿದೆ. ಗಂಗಾವತಿ ವ್ಯಾಪ್ತಿ ಪ್ರಕರಣಗಳ ವಿಚಾರಣೆಗೆ ಅವಕಾಶ ನೀಡಿದ್ದು, ಜಿಲ್ಲಾ ಕೋರ್ಟ್​ ನತೆಗೆ ಧಕ್ಕೆಯಾಗಲಿದೆ. ಈ ಮೊದಲು ಕೆಲವೊಂದು ಸಾಮಾನ್ಯ ಪ್ರಕರಣ ವಿಚಾರಣೆಗೆ ಅವಕಾಶವಿತ್ತು. ಸರ್ಕಾರ ಹೆಚ್ಚುವರಿ ಪ್ರರಕಣ ವಿಚಾರಣೆಗೆ ಅವಕಾಶ ನೀಡಿದ್ದನ್ನು ಜಿಲ್ಲಾ ವಕೀಲರ ಸಂ ತೀವ್ರವಾಗಿ ವಿರೋಧಿಸಿ, ಅಸಹಕಾರ ತೋರಿತು.

ಜಿಲ್ಲಾ ಕೇಂದ್ರದಲ್ಲಿ ಪ್ರಧಾನ ನ್ಯಾಯಾಧೀಶರು ಇರಲಿದ್ದಾರೆ. ಹೆಚ್ಚುವರಿ ಕೋರ್ಟ್​ಗೆ ವಿಶೇಷ ಅಧಿಕಾರ ನೀಡಬಾರದು. ಜಿಲ್ಲಾ ಕೇಂದ್ರ ನ್ಯಾಯಾಲಯಕ್ಕೆ ವಿಶೇಷ ಪ್ರಕರಣಗಳ ವಿಚಾರಣೆ ಅಧಿಕಾರ ಇರಲಿ. ಗಂಗಾವತಿ ವಿಭಾಗದ ಪ್ರಕರಣಗಳು ಇನ್ನು ಮುಂದೆ ಗಂಗಾವತಿ ಕೋರ್ಟ್​ನಲ್ಲಿಯೇ ಮುಂದುವರಿಯಲಿವೆ. ಹೆಚ್ಚುವರಿ ಕೋರ್ಟ್​ ಶಾಶ್ವತವಲ್ಲ. ತಕ್ಷಣ ಕಾನೂನು ಇಲಾಖೆ ಆದೇಶ ವಾಪಸ್​ ಪಡೆಯಲಿ. ಸರ್ಕಾರದ ಕ್ರಮ ಪ್ರಶ್ನಿಸಿ ಹೈ ಕೋರ್ಟ್​ಗೆ ರಿಟ್​ ಸಲ್ಲಿಸುವುದಾಗಿ ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ತಿಳಿಸಿದರು.