ಜಿಲ್ಲೆ

ನಾರಾವಿ ಐಸಿರಿ ಎಂಟರ್‌ಪ್ರೈಸಸ್‌ನಲ್ಲಿ ಕೂಪನ್ ಬಿಡುಗಡೆ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನಾರಾವಿ ಐಸಿರಿ ಎಂಟರ್‌ಪ್ರೈಸಸ್‌ನಲ್ಲಿ ವಿಜಯವಾಣಿ ವಿಜಯೋತ್ಸವ ಆಚರಿಸುತ್ತಿದ್ದು, ಇದರ ಕೂಪನನ್ನು ಉದ್ಯಮಿ ದಿವಾಕರ ಭಂಡಾರಿ ಬಿಡುಗಡೆಗೊಳಿಸಿದರು. ಪ್ರತಿ 2 ಸಾವಿರ ರೂ. ಮೇಲ್ಪಟ್ಟ ಖರೀದಿಯ ಒಂದು ಬಿಲ್‌ಗೆ ಅದೃಷ್ಟ ಕೂಪನ್ ನೀಡಲಾಗುತ್ತಿದ್ದು ಕಾರು, ಬೈಕ್ ಇನ್ನಿತರ ಬಂಪರ್ ಬಹುಮಾನ ಸಹಿತ 2024 ಬಹುಮಾನ ಗೆಲ್ಲುವ ಅವಕಾಶವಿದೆ.

ವಿಜಯವಾಣಿ ವಿಜಯೋತ್ಸವದಲ್ಲಿ ಹ್ಯಾಚ್ ಬ್ಯಾಕ್ ಕಾರು 7, ದ್ವಿಚಕ್ರವಾಹನ 10, 32 ಇಂಚಿನ ಎಲ್‌ಇಡಿ ಟಿವಿ 10, ರೆಫ್ರಿಜರೇಟರ್ 10, ವಾಷಿಂಗ್ ಮಷಿನ್ 10, 1 ಗ್ರಾಂ ಚಿನ್ನದ ನಾಣ್ಯ 140, ಸೇಫ್ ಲಾಕರ್ 10, ವೆಟ್ ಗ್ರೈಂಡರ್ 20, 20 ಗ್ರಾಂ ಬೆಳ್ಳಿ ನಾಣ್ಯ 223, ಮಿಕ್ಸರ್ 150, ಟ್ರಾಲಿ ಬ್ಯಾಗ್ 20, ಎಲೆಕ್ಟ್ರಿಕ್ ಕೆಟಲ್ 350, ಸ್ಮಾರ್ಟ್ ವಾಚ್ 30, ಇಂಡಕ್ಷನ್ ಸ್ಟವ್ 90, ಹಾಟ್ ಫ್ಲಾಸ್ಕ್ 300, ಪ್ರೆಶರ್ ಕುಕ್ಕರ್ 400, ಪೆಡೆಸ್ಟಲ್ ಫ್ಯಾನ್ 260, ಕಾಪರ್ ಬಾಟಲ್ 470 ಸೇರಿ 2500ಕ್ಕೂ ಅಧಿಕ ಬಹುಮಾನಗಳು ಗ್ರಾಹಕರಿಗೆ ನೀಡಲಾಗುತ್ತಿದೆ.

ಕೂಪನ್ ಬಿಡುಗಡೆ ಸಂದರ್ಭದಲ್ಲಿ ಗ್ರಾಹಕ ಟೋನಿ ಟಿ, ಅಶೋಕ್ ಕುಮಾರ್, ರಾಕೇಶ್ ಉಪಸ್ಥಿತರಿದ್ದರು. ಮಾಲೀಕ ಯೋಗೀಶ್ ಸ್ವಾಗತಿಸಿದರು.

ಎಲ್ಲ ಕಂಪನಿಗಳ ಉತ್ಕೃಷ್ಟ ಉತ್ಪನ್ನಗಳು

ನಾರಾವಿ ಐಸಿರಿ ಎಂಟರ್‌ಪ್ರೈಸಸ್‌ನಲ್ಲಿ ಬಜಾಜ್ ಫೈನಾನ್ಸ್ ಸರ್ವೀಸ್ ಮತ್ತು ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಸರ್ವೀಸ್ ಸೌಲಭ್ಯದೊಂದಿಗೆ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಇಎಂಐ ಸೌಲಭ್ಯ ದೊರೆಯಲಿದೆ. ಸಂಸ್ಥೆ ಎಲ್ಲ ಕಂಪನಿಯ ಟಿವಿ, ರೆಫ್ರಿಜರೇಟರ್, ಮಿಕ್ಸಿ, ಗ್ರೈಂಡರ್, ಫ್ಯಾನ್, ಎಸಿ, ಇನ್ವೆಸ್ಟರ್ ಸೋಲಾರ್ ಸಿಸ್ಟಮ್, ವಾಟರ್‌ಹೀಟರ್, ಗ್ಯಾಸ್ ಗೀಸರ್ಸ್‌, ಕುಕ್ಕರ್ಸ್‌, ಸ್ಟೀಲ್ ಪ್ರಾಡಕ್ಟ್ಸ್, ಹಾಸಿಗೆ, ಸೋಫಾ, ಫರ್ನಿಚರ್ಸ್‌, ಹೋಂ ಥಿಯೆಟರ್ ಹಾಗೂ ಪ್ಲಾಸ್ಟಿಕ್ ಪ್ರೊಡಕ್ಟ್‌ಗಳ ವಿಶೇಷವಾದ ದಾಸ್ತಾನು ಹೊಂದಿದೆ. ಇದರೊಂದಿಗೆ ಸಂಸ್ಥೆಯು ಟ್ರಾವೆಲ್ ಏಜೆನ್ಸಿಯನ್ನು ಹೊಂದಿದ್ದು ವಿಮಾನ, ರೈಲು, ಬಸ್, ವಿದೇಶ ವ್ಯಾಸಂಗ ಸಂದರ್ಶನ ವೀಸಾದ ವ್ಯವಸ್ಥೆ ಮಾಡಲಾಗುತ್ತದೆ.