ನುಗ್ಗೇಹಳ್ಳಿ: ಬಾಗೂರು ಹೋಬಳಿಯ ಗೋವಿನಕೆರೆ ಗ್ರಾಮದ ಲಕ್ಷ್ಮೀ ದೇವರಿಗೆ ಸೇರಿದ 1 ಎಕರೆ 35 ಗುಂಟೆ ದೇವರ ಜೋಡಿ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಯಶವಂತ್ ಹಾಗೂ ನಟರಾಜ್ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿ ಮುಂಭಾಗ ಗೋವಿನಕೆರೆ ಗ್ರಾಮದ ಅರ್ಚಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಅಶೋಕ್ ಮಾತನಾಡಿ, ಲಕ್ಷ್ಮೀದೇವರ ಜೋಡಿ ಜಮೀನು ಸರ್ವೇ ನಂಬರ್ 126 ರಲ್ಲಿ 1. 11 ಎಕರೆ, ಸರ್ವೇ ನಂಬರ್ 10 ರಲ್ಲಿ 24 ಗುಂಟೆ ಜಮೀನನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಅರ್ಚಕರಾದ ಹನುಮೇಗೌಡ ತೆಂಗು ಶುಂಠಿ ಬೆಳೆದಿದ್ದು, ಈಗಲೂ ಅನುಭವದಲ್ಲಿದ್ದಾರೆ. ಈ ಜಮೀನನ್ನು ಸುಳ್ಳು ದಾಖಲೆ ನೀಡಿ ಮೇ 30 ರಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಇದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಅರ್ಚಕ ಹನುಮೇಗೌಡ, ಗೌಡಪ್ಪ, ರಾಜೇಗೌಡ, ಇಂದ್ರೇಶ್, ತಿಮ್ಮೇಗೌಡ, ಶೇಖರಗೌಡ, ಪರಮೇಶ್, ಸಂದೀಪ್, ಕೃಷ್ಣೇಗೌಡ, ಚಂದ್ರೇಗೌಡ ಇತರರು ಹಾಜರಿದ್ದರು.