ಶಿರ್ವ: ಜೊತೆಗೆ ಮೃತಪಟ್ಟು ಒಂದೇ ಚಿತೆಯಲ್ಲಿ ಅಂತ್ಯ ಸಂಸ್ಕಾರ ಕ್ರಿಯೆಗಳಿಗೆ ಒಳಗಾದ ಬೆಳಪುವಿನ ದಂಪತಿ ಸಾವಿನ ಘಟನೆಯ ನೆನಪು ಮಾಸುವ ಮುನ್ನವೇ ಅಂತಹುದೇ ಘಟನೆ ಕುತ್ಯಾರಿನ ಅಂಜಾರುವಿನಲ್ಲಿ ನಡೆದಿದೆ. ಕುತ್ಯಾರು ಅಂಜಾರು ಮನೆ ಶಾಂತಾ ಆರ್.ಶೆಟ್ಟಿ(85) ಮತ್ತು ಕಿನ್ನಿಗೋಳಿ ಕೊಟ್ರಾಡಿ ರಾಮಣ್ಣ ಶೆಟ್ಟಿ (90) ಮೃತ ದಂಪತಿ. ಮೃತರು ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.