ಜಿಲ್ಲೆ

ಹಾಡಹಗಲಲ್ಲೇ ದೇವಳಕ್ಕೆ ಕನ್ನ ಹಾಕಿ ಸಿಕ್ಕಿಬಿದ್ದ ದಂಪತಿ!

Dakshina Kannada

ಬೈಂದೂರು: ಉಡುಪಿ ಜಿಲ್ಲೆಯ ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಳವಿಗೆ ಯತ್ನಿಸಿದ ದಂಪತಿ ಕಂಬಿ ಎಣಿಸುವಂತಾಗಿದೆ.

ಕಂಬದಕೋಣೆ ಕರುಣಾಕರ-ವಿಶು ರಾಣಿ ಕಳವು ಮಾಡಲು ಬಂದ ಜೋಡಿ. ದೇವಸ್ಥಾನ ಗರ್ಭಗುಡಿ ಬೀಗ ಮುರಿದು ಒಳ ನುಗ್ಗಿದ ಇವರು ಕಾಣಿಕೆ ಡಬ್ಬ ಕಳವು ಮಾಡಲು ನಡೆಸಿದ ಪ್ರಯತ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳವು ಯತ್ನ ವಿಫಲವಾಗಿ ಬರಿಗೈಯಲ್ಲಿ ಹಿಂದಿರುಗಿದರೂ, ಗಂಗೊಳ್ಳಿ ಠಾಣೆ ಪೊಲೀಸರು ಇಬ್ಬರನ್ನು ಸೆರೆ ಹಿಡಿದಿದ್ದಾರೆ.

ಕಳ್ಳರು ನುಗ್ಗಿದ್ದರಿಂದ ಹಣ ಒಡವೆ ಕಳವಾಗದಿದ್ದರೂ ದೇವಸ್ಥಾನಕ್ಕೆ 60 ಸಾವಿರ ರೂಪಾಯಿಗೂ ಮಿಕ್ಕಿ ನಷ್ಟ ಮಾಡಿದ್ದಾರೆ. ಕಳ್ಳರು ನುಗ್ಗಿದ್ದರಿಂದ ಶಾಂತಿ, ವಾಸ್ತು ರಾಕ್ಷೋಘ್ನ ಹೋಮ, ಚೋರ ಶಾಂತಿ ಮಾಡುವ ಮೂಲಕ ದೇವಸ್ಥಾನ ಶುದ್ಧೀಕರಿಸಬೇಕಿದೆ. ಮೊನ್ನೆ ಮೊನ್ನೆ ಕರ್ಕಾಟಕ ಅಮಾವಾಸ್ಯೆ ಜಾತ್ರೆ ನಡೆದಿದ್ದು, ಕಾಣಿಕೆ ಡಬ್ಬ ತುಂಬಿರುತ್ತದೆ ಎಂದು ಭಾವಿಸಿ ಬಂದ ಜೋಡಿ ನಿರಾಶೆಗೊಂಡಿದ್ದೂ ಅಲ್ಲದೆ, ಪೊಲೀಸರ ಅತಿಥಿಯಾಗುವಂತಾಗಿದೆ.