ಶಿವಮೊಗ್ಗ: ನಗರದಲ್ಲಿ ಸಲೂನ್ ಮತ್ತು ಸ್ಪಾದಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಿರುವ ಪೊಲೀಸರು, ಆರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಕುವೆಂಪು ರಸ್ತೆಯಲ್ಲಿ ರಾಯಲ್ ಆರ್ಚ್ ಫ್ಯಾಮಿಟಿ ಸಲೂನ್ ಮತ್ತು ಸ್ಪಾ ಮಾಲೀಕರಾದ ವಿದ್ಯಾಶ್ರೀ ಮತ್ತು ಅವರ ಪತಿ ವೈ.ಗೋಪಾಲ್ ಬಂಧಿತರು. ಬೇರೆ ಕಡೆಯಿಂದ ಹುಡುಗಿಯರನ್ನು ಕರೆಯಿಸಿ ಹಣದ ಆಮೀಷ ತೋರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು.
ಈ ಹಿನ್ನಲೆಯಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪವಿಭಾಗ-ಬಿ ಡಿವೈಎಸ್ಪಿ ಎಂ.ಸುರೇಶ್ ನೇತೃತ್ವದಲ್ಲಿ ಮಹಿಳಾ ಠಾಣೆ ಇನ್‌ಸೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ. ಈ ಬೇಳೆ ಬೇರೆ ಕಡೆಯಿಂದ ಕರೆತಂದಿದ್ದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.