ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲ್ಲಿ ಹಮ್ಮಿಕ್ಕೊಂಡಿದ್ದ ಾರೆನ್ (ಹಾಸ್ಯ) ಪ್ರಸಂಗಗಳು ಕಾರ್ಯಕ್ರಮದಲ್ಲಿ ಡಾ.ಬಸವರಾಜ ಜಗಜಂಪಿ ಮಾತನಾಡಿದರು. ಆರ್. ವಿ. ಭಟ್, ಡಾ.ಅರವಿಂದ ಕುಲಕರ್ಣಿ, ಪ್ರೊ.ಜಿ.ಕೆ.ಕುಲಕರ್ಣಿ, ಗುಂಡೇನಟ್ಟಿ ಮಧುಕರ, ಅರವಿಂದ ಹುನಗುಂದ ಇತರರಿದ್ದರು. 
ಜಿಲ್ಲೆ

ದೇಶದ ಪ್ರಗತಿ ಮಂದಗತಿಯಲ್ಲಿರುವುದು ಬೇಸರ

ಶಂಕರ ಗೆಜ್ಜಿ

ಬೆಳಗಾವಿ: ವಿದೇಶಿಯರು ಮಣ್ಣಿನಲ್ಲಿ ಚಿನ್ನ ತೆಗೆಯುವ ಕೆಲಸವನ್ನು ಮಾಡುತ್ತಲಿದ್ದಾರೆ. ಆದರೆ ಚಿನ್ನವೇ ತುಂಬಿರುವ ನಮ್ಮ ದೇಶದ ಪ್ರಗತಿ ಮಂದಗತಿಯಲ್ಲಿರುವುದು ಬೇಸರದ ಸಂಗತಿ ಎಂದು ಡಾ.ಬಸವರಾಜ ಜಗಜಂಪಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕ್ಕೊಂಡಿದ್ದ ಾರೆನ್ (ಹಾಸ್ಯ) ಪ್ರಸಂಗಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಮ್ಮೆಯಾದರೂ ವಿದೇಶಗಳಿಗೆ ಭೇಟಿ ಕೊಡಬೇಕು. ವಿದೇಶ ಪ್ರವಾಸ ಹೊಸ ಅನುಭವಗಳನ್ನು ತಂದುಕೊಡುತ್ತದೆ ಎಂದರು.

ರಂಗಕರ್ಮಿ ಡಾ.ಅರವಿಂದ ಕುಲಕರ್ಣಿ ಮಾತನಾಡಿ, ವಿದೇಶಿಯರು ಸೀ ಪುರುಷರೆಂಬ ಭೇದ-ಭಾವ ತೋರುವುದಿಲ್ಲ ಎಂದರು. ಪ್ರೊ.ಜಿ.ಕೆ.ಕುಲಕರ್ಣಿ ಮಾತನಾಡಿ, ನಮ್ಮ ದೇಶದಲ್ಲಿರುವ ಸುಖ, ಸಂತೋಷ, ಮಾನಸಿಕ ನೆಮ್ಮದಿ ಅಲ್ಲಿ ಸಿಗಲಾರದು ಎಂದರು.

ಸಿಂಡಿಕೇಟ್ ಬ್ಯಾಂಕ್ ನಿವತ್ತ ಮುಖ್ಯ ವ್ಯವಸ್ಥಾಪಕ ಆರ್.ವಿ.ಭಟ್ ,ಅರವಿಂದ ಪಾಟೀಲ ಮಾತನಾಡಿದರು . ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ಮಾತನಾಡಿದರು. ಅರವಿಂದ ಹುನಗುಂದ ನಿರೂಪಿಸಿದರು. ತಾನಾಜಿ ವಂದಿಸಿದರು.