ಚನ್ನಮ್ಮನ ಕಿತ್ತೂರು: ದೇಶ ಸುಧಾರಣೆಗೆ ಶಿಣ ಪ್ರಮುಖ ಪಾತ್ರ ವಹಿಸುತ್ತದೆ. ನಾವು ವಿದ್ಯಾವಂತರಾದರೆ ಎಲ್ಲ ರೀತಿಯಲ್ಲಿ ಅಭಿವದ್ಧಿ ಸಾಧ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಕೋಟೆ ಆವರಣದ ಮುಂಭಾಗದಲ್ಲಿ ಶನಿವಾರ ಪಟ್ಟಣ ಪಂಚಾಯಿತಿಯಿಂದ ಹಾಗೂ ಶಿಣ ಇಲಾಖೆ ಶನಿವಾರ ಆಯೋಜಿಸಿದ್ದ 2024&25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕರಿಗೆ ಪುರಸ್ಕಾರ ಹಾಗೂ ಗೌರವ ಸನ್ಮಾನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ಎಸ್ಎಲ್ಸಿ ಲಿತಾಂಶದಲ್ಲಿ ಹಿಂದೆ ಇದ್ದ ಕಿತ್ತೂರು ೇತ್ರವನ್ನು ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತೆ ಶ್ರಮಿಸಿದ ಎಲ್ಲರಿಂದ ಈ ಸಾಧನೆ ಸಾಧ್ಯವಾಗಿದೆ. ಈಗಿನ ಕಾಲದಲ್ಲಿ ಶಿಣ ಬಹಳ ಮುಖ್ಯವಾಗಿದೆ. ಶಿಣ ೇತ್ರಕ್ಕೆ ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಪೂರೆಸುವ ಕೆಲಸ ಸದಾ ಮಾಡುತ್ತೇನೆ.
ೇತ್ರ ಶಿಣಾಧಿಕಾರಿ ಸಿ.ವೆ.ತುಬಾಕಿ ಮಾತನಾಡಿ, ಚನ್ನಮ್ಮನ ಕಿತ್ತೂರು ಇದೇ ಪ್ರಥಮ ಬಾರಿ ಶಿಣ ೇತ್ರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಕಾರಣ ಆತ್ಮವಿಶ್ವಾಸ. ನಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಇದ್ದರೆ, ಸಚಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ೇತ್ರದ 52 ಶಾಲೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ಶಿಕರಿಗೆ ಸನ್ಮಾನಿಸಿ ಸತ್ಕರಿಸಿದರು. ಸಾನ್ನಿಧ್ಯ ವಹಿಸಿದ್ದ ರಾಜಗುರು ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹಾಗೂ ಗುರು ಮಡಿವಾಳೇಶ್ವರ ನಿಚ್ಚಣಕಿ ಮಠದ ಪಂಚಾರಿ ಸ್ವಾಮೀಜಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಹಾರೆಸಿದರು. ಕೆಪಿಸಿಸಿ ಸದಸ್ಯ ರೋಹಿಣಿ ಪಾಟೀಲ, ಪಪಂ ಅಧ್ಯ ಜೆ ಸಿದ್ದರಾಮ ಮಾರಿಹಾಳ, ಬೆಲಹೊಂಗಲ ಶಿಣಾಧಿಕಾರಿ ಎ.ಎಂ.ಪ್ಯಾಟಿ, ಸಿಪಿಐ ಶಿವಾನಂದ ಗುಡಗನಟ್ಟಿ, ತಾಪಂ ಇಒ ಕಿರಣ ಗೋರ್ಪಡೆ, ಪಿಡಬ್ಲ್ಯುಡಿ ಎಇಇ ಸಂಜೀವ ಮಿರಜಕರ್, ಬಸವರಾಜ ಕುಪ್ಪಸಗೌಡ್ರ, ಎಂ.ಪಿ.ಕದಂಇತರರು ಇದ್ದರು.