ಹುಬ್ಬಳ್ಳಿ : ದೇಶ ವಿಭಜನೆಯ ಕರಾಳತೆ ಸ್ಮರಿಸುವ ಛಾಯಾಚಿತ್ರ ಪ್ರದರ್ಶನವನ್ನು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರ ನಿಂಗಯ್ಯ ದಾನಯ್ಯ ಶಿಸಂಬ್ರಿಮಠ ಅವರು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು.
ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ವಿಭಜನೆಯ ಕರಾಳತೆಯನ್ನು ಸ್ಮರಿಸುವ ದಿನವು ಸಾಮಾಜಿಕ ವಿಭಜನೆ ಮತ್ತು ಅಸಾಮರಸ್ಯಗಳೆಂಬ ವಿಷವನ್ನು ತೊಡೆದುಹಾಕುವ ಅಗತ್ಯತೆಯನ್ನು ನೆನಪಿಸುತ್ತದೆ ಹಾಗೂ ಏಕತೆಯ ಭಾವನೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರಾದ ದಿ. ದೇವೇಂದ್ರಕುಮಾರ ಹಕಾರಿ ಅವರ ಪುತ್ರ ರವಿಶಂಕರ ಹಕಾರಿ, ದಿ. ಜಗನ್ನಾಥರಾವ ಕುಲಕರ್ಣಿ ಅವರ ಪುತ್ರ ದತ್ತರಾಜ ಕುಲಕರ್ಣಿ, ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಯು. ಸುಬ್ಬಾರಾವ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ವಲಯದ ಮಹಿಳಾ ಕಲ್ಯಾಣ ಸಂಘಟನೆ ಪ್ರಧಾನ ಕಾರ್ಯುಲಯದ ಅಧ್ಯಕ್ಷೆ ಡಾ. ವಂದನಾ ಶ್ರೀವಾಸ್ತವ, ಸಂಘಟನೆಹುಬ್ಬಳ್ಳಿ ವಿಭಾಗದ ಅಧ್ಯಕ್ಷೆ ರುಚಿ ಖರೆ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಧಾರವಾಡ, ಬೆಳಗಾವಿ, ವಿಜಯಪುರ, ಹೊಸಪೇಟೆ, ಬಳ್ಳಾರಿ, ವಾಸೊ್ಕೕ , ಗದಗ, ಕೊಪ್ಪಳ, ಬಾಗಲಕೋಟೆ ರೈಲು ನಿಲ್ದಾಣಗಳಲ್ಲಿಯೂ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.