ಬೆಳಗಾವಿ: ದೇಶಕ್ಕಾಗಿ ಸರ್ವಸ್ವವನ್ನೇ ಅರ್ಪಿಸಿದ ಯೋಧರ ಆದರ್ಶ ಎಲ್ಲರಿಗೂ ಮಾದರಿಯಾ ಗಬೇಕು. ದೇಶದ ಗಡಿ ಭದ್ರತೆಯಲ್ಲಿ ಯೋಧರ ಪಾತ್ರ ದೊಡ್ಡದಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಹೇಳಿದರು. ನಗರದ ಕುಮಾರ ಗಂಧರ್ವ ರಂಗಮಂದಿರಲ್ಲಿ ಜಿಲ್ಲೆಯ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಆ್ ವೇಣುಗ್ರಾಮ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಮಾತನಾಡಿ, ದೇಶದ ಅಭಿವೃದ್ಧಿ, ರಾಷ್ಟ್ರ ನಿರ್ಮಾಣದಲ್ಲಿ ಯೋಧರು, ರೈತರು, ಶಿಕ್ಷಕರ ಕೊಡುಗೆ ಅಪಾರ. ದೇಶದಲ್ಲಿರುವ ಜನರು ಶಾಂತಿ, ನೆಮ್ಮದಿಯಿಂದರಲು ಯೋಧರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು. ವಿಜಯ ದಿವಸ್ ಸ್ಮರಣಾರ್ಥ ನಗರದ ಅಶೋಕ ವೃತ್ತದಿಂದ ಕುಮಾರ ಗಂಧರ್ವ ಕಲಾಮಂದಿರವರೆಗೆ ಬೃಹತ್ ಬೈಕ್ ರ‌್ಯಾಲಿ ಜರುಗಿತು. ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟ ಅಧ್ಯಕ್ಷ ಜಗದೀಶ ಪೂಜಾರಿ, ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ವಿನಯಕುಮಾರ ಬಾಳಿಕಾಯಿ, ವೀಣಾ ವಿಜಾಪೂರೆ, ಮಂಗಲಾ ಮಠದ, ಶಿವನಗೌಡ ಪಾಟೀಲ, ನಾಗರತ್ನ ರಾಮಗೌಡ, ರಮೇಶ ಚೌಗಲಾ, ದಯಾನಂದ ಢಾಳಿ, ಸೋಮನಾಥ ಕುಡಚಿಕರ, ಬಸವಂತಪ್ಪ ಕಾರಾಂವಿ, ಮಲ್ಲಪ್ಪ ಕಂಕಣವಾಡಿ, ರಾಜಶೇಖರ ಹಂಜಿ ಇತರರಿದ್ದರು.