ಶ್ರೀನಿವಾಸ ವಿಶ್ವವಿದ್ಯಾಲಯ ಪಾಂಡೇಶ್ವರ ಕ್ಯಾಂಪಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಪಕುಲಪತಿ ಡಾ.ಪಿ.ಎಸ್.ಐತಾಳ್ ಧ್ವಜಾರೋಹಣ ಮಾಡಿದರು. ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್, ಕುಲಸಚಿವ ಡಾ.ಅನಿಲ್ ಕುಮಾರ್, ಡೀನ್ ಪ್ರೊ.ವೆಂಕಟೇಶ್ ಅಮೀನ್ ಮೊದಲಾದವರು ಹಾಜರಿದ್ದರು.  
ಜಿಲ್ಲೆ

ದೇಶಕ್ಕೆ ನಿಷ್ಠಾವಂತರಾಗಿ, ಸುಧಾರಣೆಗೆ ಬದ್ಧ, ಶ್ರೀನಿವಾಸ ವಿವಿ ಕ್ಯಾಂಪಸ್‌ನಲ್ಲಿ ಡಾ.ಅಜಯ್ ಕುಮಾರ್ ಸಲಹೆ

Mangaluru - Shravan Kumar Nala

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಪಾಂಡೇಶ್ವರ ಕ್ಯಾಂಪಸ್‌ನಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಶ್ರೀನಿವಾಸ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ.ಎಸ್.ಐತಾಳ್ ಧ್ವಜಾರೋಹಣ ನೆರವೇರಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ವಿಭಾಗದ ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್ ಮಾತನಾಡಿ, ಪರಹಿತ ಚಿಂತನೆಯ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಪ್ರತಿಯೊಬ್ಬರೂ ಸ್ವಾತಂತ್ರ್ಯವನ್ನು ಸವಿಯಬೇಕು. ವೈಯಕ್ತಿಕ ಬೆಳವಣಿಗೆ ಸಾಧಿಸುವುದರೊಂದಿಗೆ ದೇಶಕ್ಕೆ ನಿಷ್ಠಾವಂತರಾಗಿ ದೇಶದ ಸುಧಾರಣೆಗೆ ಬದ್ಧರಾಗಿರಬೇಕು ಎಂದು ಹೇಳಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಕುಮಾರ್ ಉಪಸ್ಥಿತರಿದ್ದರು. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್‌ನ ಡೀನ್ ಪ್ರೊ.ವೆಂಕಟೇಶ್ ಅಮೀನ್ ಸ್ವಾಗತಿಸಿದರು. ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಡೀನ್ ಪದ್ಮನಾಭ ಬಿ. ವಂದಿಸಿದರು. ಪ್ರೊ.ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು.