ರಾಜು ಊರ್ಫ್ ಬಸವರಾಜು ಸುರೇಂದ್ರನಾಯ್ಕ  
ಜಿಲ್ಲೆ

ಖೋಟಾ ನೋಟು ಪ್ರಕರಣ, ಇಪ್ಪತ್ಮೂರು ವರ್ಷದ ಬಳಿಕ ಆರೋಪಿ ಪತ್ತೆ

Vijyapura - Parsuram Bhasagi

ವಿಜಯಪುರ: ಖೋಟಾ ನೋಟು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 21 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದ ನಿವಾಸಿ ರಾಜು ಊರ್ಫ್ ಬಸವರಾಜು ಸುರೇಂದ್ರನಾಯ್ಕ ಬಂಧಿತ ಆರೋಪಿ.

ಈತನ ಮೇಲೆ 2001 ಮೇ 14ರಂದು ವಿಜಯಪುರ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2003ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 3ನೇ ಆರೋಪಿಯಾಗಿದ್ದ ಈತನಿಗೆ ಶಿಕ್ಷೆ ಆಗಿತ್ತು. ಆದರೆ, ಈತ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದನು. ಆ ಉಚ್ಚ ನ್ಯಾಯಾಲಯ ಕೂಡ ಕೆಳ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿತ್ತು. ಬಳಿಕ ಅಷ್ಟಕ್ಕೆ ಸುಮ್ಮನಾಗದ ರಾಜು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಲಾಗಿ ಆ ನ್ಯಾಯಾಲಯ ಕೂಡ ಕೆಳ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿತ್ತು. ಅಲ್ಲದೇ, ಆರೋಪಿ ರಾಜು ಬಂಧನಕ್ಕೆ ವಾರೆಂಟ್ ಸಹ ಜಾರಿ ಮಾಡಿತ್ತು.

ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದನು. ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಸಂಪರ್ಕ ಕಳೆದುಕೊಂಡಿದ್ದನು. ಹೀಗಾಗಿ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಇದೀಗ ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪದ ರಾಮನಾಳ ಎಂಬ ಗ್ರಾಮದ ಜಮೀನೊಂದರಲ್ಲಿ ಹೆಸರು ಬದಲಿಸಿಕೊಂಡು ಕೆಲಸ ಮಾಡಿಕೊಂಡಿರುವ ಮಾಹಿತಿ ಮೇರೆಗೆ ಪೊಲೀಸರ ತಂಡ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.