ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಅ.28 ಮತ್ತು 29ರಂದು ಕೌನ್ಸೆಲಿಂಗ್ ನಡೆಸಲಿದೆ.
ಬೆಂ.ವಿವಿ ಸ್ನಾತಕೋತ್ತರ ವಿಭಾಗ, ರಾಮನಗರ ಸ್ನಾತಕೋತ್ತರ ಕೇಂದ್ರ ಮತ್ತು ಉಳಿದ ಸಂಯೋಜಿತ ಕಾಲೇಜುಗಳಲ್ಲಿ 2024-25ನೇ ಸಾಲಿನ ಸೀಟುಗಳಿಗೆ ಜ್ಞಾನಭಾರತಿ ಆವರಣದಲ್ಲಿರುವ ಆಯಾ ವಿಭಾಗಗಳು ಮತ್ತು ಎಚ್.ಎನ್, ಸಭಾಂಗಣದಲ್ಲಿ ಕೌನ್ಸೆಲಿಂಗ್ ನಡೆಯಲಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.