ಜಿಲ್ಲೆ

ಕೋಸ್ಟ್‌ ಗಾರ್ಡ್‌ಗೆ ಕಟ್ಟಡ ಕಟ್ಟಲು ಅವಕಾಶ ನೀಡದಂತೆ ಮನವಿ

Uttara Kannada - Subash Hegde

ಕಾರವಾರ: ಕೋಸ್ಟ್ ಗಾರ್ಡ್ಗೆ ಟ್ಯಾಗೋರ್ ಕಡಲ ತೀರದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ನೇತೃತ್ವದಲ್ಲಿ ಮೀನುಗಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೋಸ್ಟ್ಗಾರ್ಡ್ ಅಮದಳ್ಳಿಯಲ್ಲಿ 26 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಂಡು ಅಲ್ಲಿ ಕಚೇರಿ ಹಾಗೂ ವಸತಿ ಸಮುಚ್ಛಯದ ಕಾಮಗಾರಿ ಆರಂಭ ಮಾಡಿದೆ. ಈಗಾಗಲೇ ಸೀಬರ್ಡ್ಗಾಗಿ 11 ಸಾವಿರ ಎಕರೆ ಭೂಮಿಯನ್ನು ನೌಕಾನೆಲೆಗೆ ಬಿಟ್ಟುಕೊಡಲಾಗಿದೆ. ಇದರಿಂದ ಹಲವು ಕಡಲ ತೀರಗಳೂ ಮಾಯವಾಗಿವೆ. ಮೀನುಗಾರಿಕೆಗೆ ಇರುವ ಒಂದೇ ಕಡಲ ತೀರದಲ್ಲಿ ಬೇರೆ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿದೆ. ಈ ಹಿಂದೆ 2009 ರಲ್ಲಿ ಕೋಸ್ಟ್ಗಾರ್ಡ್ಗೆ ಭೂಮಿ ನೀಡಿದಾಗ ಪ್ರತಿಭಟನೆ ಮಾಡಲಾಗಿತ್ತು ಎಂದು ವಿವರಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ, ಮೀನುಗಾರರ ಮುಖಂಡೆ ಸುಶೀಲಾ ಹರಿಕಂತ್ರ, ಚೇತನ ಹರಿಕಂತ್ರ ಇತರು ಇದ್ದರು.