ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕಾಸ್ಮಸ್ ಕ್ಲಬ್ 100 ವರ್ಷ ಪೂರೈಸಿದ್ದು ಹೆಮ್ಮೆಯ ಸಂಗತಿ. ಈ ಹಿನ್ನೆಲೆಯಲ್ಲಿ ಡಿ. 29ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ವಿದ್ಯಾಗಿರಿ ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿರುವ ಸನ್ನಿಽ ಕಲಾಕ್ಷೇತ್ರದಲ್ಲಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ನಿತಿನ ಟಗರ್‌ಪುರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸುವರು. ನಾನು ಅಧ್ಯಕ್ಷತೆ ವಹಿಸುತ್ತೇನೆ. ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳು ಸ್ವಾಗತಗೀತೆ ಪ್ರಸ್ತುತಪಡಿಸುವರು. ಮಧ್ಯಾಹ್ನ 12ಕ್ಕೆ ಸಂಗೀತಾ ಕಟ್ಟಿ ತಂಡದಿ0ದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.
ಕ್ಲಬ್ ಸಾಕಷ್ಟು ಏರಿಳಿತಗಳ ಮಧ್ಯೆ 100 ವರ್ಷ ಪೂರೈಸಿದೆ. ಸಾಮಾಜಿಕ ಕಾರ್ಯ, ಮನರಂಜನೆ ಮತ್ತು ಕ್ರೀಡಾ ತಾಣವಾಗಿರುವ ಕಾಸ್ಮಸ್ ಕ್ಲಬ್‌ನ ಶತಮಾನೋತ್ಸವ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.