ಹೊಸಪೇಟೆ: ಮೆಣಸಿನಕಾಯಿ ಬಿಜೋತ್ಪಾದನೆಯಲ್ಲಿ ತನ್ನದೇ ಆದ ವಿಶೇಷ ಸಾಧನೆಗೈದ ಕೊರ್ಟೆವಾ ಅಗ್ರಿಸೈನ್ಸ್ ನಿಂದ ನಗರದ ಖಾಸಗಿ ಹೊಟೇಲ್ ನಲ್ಲಿ ಶುಕ್ರವಾರ ಮೆಣಸಿನಕಾಯಿ ಕೃಷಿ ಸಮಾವೇಶಕ್ಕೆ ರೈತರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಮಾರುಕಟ್ಟೆ ನಿರ್ದೇಶಕ ಜಿತೇಂದ್ರ ಜೋಷಿ ಮಾತನಾಡಿ, ಕೊರ್ಟೆವಾ ಸಂಸ್ಥೆಯ ರೈತರ ಪರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಬೆಳೆಗಳಿಗೂ ಸಂಶೋಧನೆ ನಡೆಸಲಾಗುತ್ತದೆ. ಕೇವಲ ಕೃಷಿ ವಿಭಾಗಕ್ಕೆ ತೊಡಗಿದ್ದೇವೆ. ರೈತರಿಗೆ ತಂತ್ರಜ್ಞಾನ ಮೂಲಕ ರೈತರಿಗೆ ಉಪಾಯುಕ್ತ, ಆದಾಯ ಹಾಗೂ ಸುರಕ್ಷಿತವಾಗಿ ಸುಸ್ಥಿರ ಕೃಷಿ ಮಾಡಲು ಮಾಡಲು ನಮ್ಮ ವಾಗ್ದಾನವಾಗಿದೆ. ಐತಿಹಾಸಿಕ ಸ್ಥಳದಲ್ಲಿ ನಾವು ಸಮಾವೇಶ ಮಾಡಿದ್ದೆವೆ. ಐತಿಹಾಸಿಕ ಘಟನೆಗೆ ನಾಂದಿ ಹಾಡುತ್ತೇವೆ. ಕೇವಲ ರೈತರ ಉತ್ಪಾದನೆ ಮಾತ್ರವಲ್ಲ ರೈತರ ಯೋಗಕ್ಷೇಮ ಕಾಪಾಡುವುದು ನಮ್ಮ ಧ್ಯೇಯವಾಗಿದೆ ಎಂದರು.
ಸಮಾವೇಶದಲ್ಲಿ ಮೆಣಸಿನಕಾಯಿ ಉತ್ಪಾದನೆ ಹೆಚ್ಚಳ, ಆದಾಯದ ಹೆಚ್ಚಳದ ಕುರಿತು ರೈತರಿಗೆ ತಿಳುವಳಿಕೆ ಮಾಹಿತಿ ನೀಡಲಾಯಿತು. ಜತೆಗೆ ರಫ್ತು ಕುರಿತು ಸಹ ರೈತರಿಗೆ ಮಾಹಿತಿ ನೀಡಲಾಯಿತು. ಇನ್ನು ಮೆಣಸಿಕಾಯಿ ಕೃಷಿ ಸಮಾವೇಶದಲ್ಲಿ ಬಳ್ಳಾರಿ, ರಾಯಚೂರು, ವಿಜಯನಗರ, ಯಾದಗಿರಿ, ವಿಜಯಪುರ ಜಿಲ್ಲೆಯ ನೂರಾರು ರೈತರು ಭಾಗಿಯಾಗಿದ್ದರು.
ರಾಚೂಯರನ ಕೃಷಿ ವಿಜ್ಞಾನಿ ಅರುಣ್ ಕುಮಾರ್ ಹೊಸಮನಿ, ಡಾ.ಬಸವಣ್ಣಪ್ಪ, ಬೆಂಗಳೂರಿನ ಐಐಎಚ್ ಆರ್ ವಿಜ್ಞಾನಿ ಡಾ.ಶ್ರೀಧರ್, ಕೊರ್ಟೆವಾ ವಿಜ್ಞಾನಿ ಡಾ.ಪಂಪಾಪತಿ, ಮಾರಾಟ ಜಿಎಂ ಕಮಲಾಕರ್, ಡಿಜಿ ಲೀಡ್ ವೆಂಕಟೇಶ ಇತರರಿದ್ದರು.