ಸಿಂಧನೂರು ತಾಲೂಕಿನ ಬೂದಿವಾಳದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದೂರ್ ಶಾಸ್ತ್ರೀ ಜಯಂತಿ ಮತ್ತು ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಸಮಾರಂಭ ನಡೆಯಿತು. ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ, ಉಪಾಧ್ಯಕ್ಷ ತಿಮ್ಮಣ್ಣ ಬೋವಿ, ಸಿಂಧನೂರು ತಾಲೂಕು ಅಧ್ಯಕ್ಷ ಬೀರಲಿಂಗಪ್ಪ ಚಿತ್ರಾಲಿ, ತಾಲೂಕು ಗೌರವಾಧ್ಯಕ್ಷ ನಾಗಪ್ಪ ಬೂದಿಹಾಳ ಇದ್ದರು. 
ಜಿಲ್ಲೆ

ಭ್ರಷ್ಟಾಚಾರದಿಂದ ದೇಶದ ಜನತೆಗೆ ಮೋಸ

Kopala - Desk - Eraveni

ಸಿಂಧನೂರು: ಮಹಾತ್ಮ ಗಾಂಧೀಜಿ ಅವರ ಆಶಯಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲಗೊಂಡಿವೆ ಎಂದು ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು.

ತಾಲೂಕಿನ ಬೂದಿವಾಳ ಗ್ರಾಮದಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅಂಬೇಡ್ಕರ್ ನಗರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದೂರ್ ಶಾಸ್ತ್ರೀ ಜಯಂತಿ ದಿನಾಚರಣೆ ಮತ್ತು ರೈತ ಸಂಘ ಗ್ರಾಮ ಘಟಕ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೃಷಿ ಉತ್ಪನ್ನಗಳಿಗೆ ಸ್ವತಂತ್ರ ಬಂದು 78ವರ್ಷ ಕಳೆದರೂ ಯೋಗ್ಯ ಬೆಲೆ ನಿಗದಿ ಮಾಡದೆ, ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸದೇ ರೈತರಿಗೆ ವಂಚನೆ ಮಾಡಿವೆ.

ಸರ್ಕಾರ ಪ್ರತಿ ವಷರ್ ಗಾಂಧಿ ಜಯಂತಿ ಆಚರಣೆ ಮಾಡುತ್ತಾರೆ. ಅವರ ಕನಸು ಮತ್ತು ಆಶಯಗಳನ್ನು ಗಾಳಿಗೆ ತೂರಿ ವಿಪರೀತ ಮಧ್ಯಪಾನ ಮಾರಾಟ ಮಾಡುತ್ತಿವೆ. ಭ್ರಷ್ಟಾಚಾರದಿಂದ ದೇಶದ ಜನತೆಗೆ ಮೋಸ ಮಾಡಿ ತಮ್ಮ ಸಂಪತ್ತನ್ನು ದ್ವಿಗುಣ ಮಾಡಿಕೊಳ್ಳುತ್ತಿದ್ದಾರೆ. ದೇಶದ ಮೇಲೆ ವಿಪರೀತ ಸಾಲಮಾಡಿದ್ದಲ್ಲದೇ ಜಾಸ್ತಿ ತೆರಿಗೆ ಹಾಕುವುದರ ಮೂಲಕ ದೇಶವನ್ನು ದಿವಾಳಿ ಮಾಡಿದ್ದಾರೆ ಎಂದರು.

ಜಿಲ್ಲಾ ಉಪಾಧ್ಯಕ್ಷ ತಿಮ್ಮಣ್ಣ ಬೋವಿ, ಸಿಂಧನೂರು ತಾಲೂಕು ಅಧ್ಯಕ್ಷ ಬೀರಲಿಂಗಪ್ಪ ಚಿತ್ರಾಲಿ, ತಾಲೂಕು ಗೌರವಾಧ್ಯಕ್ಷ ನಾಗಪ್ಪ ಬೂದಿಹಾಳ, ಜಿಲ್ಲಾ ಮುಖಂಡರಾದ ಲಿಂಗನಗೌಡ ನಿ., ತಾಲೂಕ ಸಂಘದ ಪದಾಧಿಕಾರಿಗಳಾದ ತಿಮ್ಮಣ್ಣ ಗಿಣಿವಾರ, ಬಸಪ್ಪ ಅಮರಾಪುರ, ಹನುಮಂತ ಬೂದಿಹಾಳ, ಆಂಜನೇಯ ಮುಸ್ಟೂರು ಜವಳಗೆರ, ಪಾರಯ್ಯಸ್ವಾಮಿ ಇದ್ದರು.