ಗುತ್ತಿಗೆದಾರ ಭೀಮಪ್ಪ ಪಾಟೀಲ್ 
ಜಿಲ್ಲೆ

ಬಿಲ್ ನಿಡಲು ಲಂಚದ ಬೇಡಿಕೆ ಆರೋಪ

corruption allegation bill matturu grama panchayat pdo 15th finance

ಕೊಪ್ಪಳ: ತಾಲೂಕಿನ ಮತ್ತೂರು ಗ್ರಾಪಂನಲ್ಲಿ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಕಾಮಗಾರಿ ನಡೆಸಿದರೂ ಪಿಡಿಒ ಮೂಲಕ ಗ್ರಾಪಂ ಸದಸ್ಯರು ಬಿಲ್ ತಡೆಹಿಡಿದಿದ್ದಾರೆ.

ಈಗಾಗಲೇ ಕಮೀಷನ್ ನೀಡಿದರೂ ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮೇಲಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲವೆಂದು ಗುತ್ತಿಗೆದಾರ ಭೀಮಪ್ಪ ಪಾಟೀಲ್ ಆರೋಪಿಸಿದರು.

ನೀರಲಗಿಯಲ್ಲಿ ಐವರು ಗ್ರಾಪಂ ಸದಸ್ಯರು ಐದು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲು ಒಪ್ಪಿಗೆ ಪತ್ರ ನೀಡಿದ್ದಾರೆ. ಒಂದು ಕಾಮಗಾರಿ ಬದಲಾವಣೆ ಆದ ಕಾರಣ ನೀರಲಗಿಯಲ್ಲಿ ಸಿಡಿ ನಿರ್ಮಾಣ ಮಾಡಲಾಗಿದೆ.

ಅಧ್ಯಕ್ಷೆ ಗೌರಮ್ಮ ಪತಿ ವೆಂಕಟೇಶ ಕಾಮಗಾರಿಗೆ ತಾನು ಮರಂ ಹಾಕಿಸಿದ್ದು, ತಾನೇ ಬಿಲ್ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ಇದೇ ನೆಪ ಇಟ್ಟುಕೊಂಡು ಪಿಡಿಒ ಬಿಲ್ ಮಾಡುತ್ತಿಲ್ಲವೆಂದು ಆರೋಪಿಸಿದರು.

ಪ್ರತಿ ಕಾಮಗಾರಿಗೆ ತಲಾ 6 ಸಾವಿರ ರೂ.ನಂತೆ ಸದಸ್ಯರು ಕಮೀಷನ್ ಪಡೆದಿದ್ದಾರೆ. ಅಧ್ಯಕ್ಷೆ ಪತಿಗೂ ಹಣ ನೀಡಿರುವೆ. ಫೋನ್ ಪೇ ಮೂಲಕ ಹಣ ವರ್ಗಾಯಿಸಿದ್ದು, ದಾಖಲೆಗಳಿವೆ.

ಅಲ್ಲದೇ ನರೇಗಾದಡಿ ಲಕ್ಷಾಂತರ ರೂ.ಕಾಮಗಾರಿ ಕೊಡಿಸುವುದಾಗಿ ಸುಳ್ಳು ದಾಖಲೆ ತೋರಿಸಿ ಅದಕ್ಕೂ ಕಮೀಷನ್ ಪಡೆದಿದ್ದಾರೆ. ಈ ಸಂಬಂಧ ಅಳವಂಡಿ ಪೊಲೀಸ್ ಠಾಣೆ ಹಾಗೂ ತಾಪಂ ಇಒಗೆ ದೂರು ಸಲ್ಲಿಸಿರುವೆ.

ಆದರೂ, ಯಾವುದೇ ಕ್ರಮವಾಗಿಲ್ಲ. ಕೆಲವರು ರಾಜೀ ಪಂಚಾಯಿತಿ ನಡೆಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.