ಶ್ರೀರಂಗಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರೊಂದಿಗೆ ಕುಳಿತು ವಕ್ ವಿವಾದ ಸಂಬಂಧ ರೈತ ಹಿತರಕ್ಷಣಾ ಹೋರಾಟ ಸಮಿತಿ ಮುಖಂಡರೊಂದಿಗೆ ಚರ್ಚಿಸಿದರು. 
ಜಿಲ್ಲೆ

ಪಹಣಿಯಲ್ಲಿ ವಕ್ ಹೆಸರು ತಿದ್ದುಪಡಿ

ಲೋಕೇಶ್ ಮನು. ಡಿ

ಶ್ರೀರಂಗಪಟ್ಟಣ: ವಕ್ ಮಂಡಳಿಯ 1964ರ ಗೆಜೆಟ್ ನೋಟಿಫಿಕೇಷನ್ ಹೊಂದಿರುವ ದಾಖಲೆಗಳ ಹೊರತು ಇನ್ಯಾವುದೇ ದಾಖಲೆಗಳ ಕಲಂ11ರಲ್ಲಿ ವಕ್ ಹೆಸರು ಕಂಡು ಬಂದಲ್ಲಿ ಅವುಗಳ ತಿದ್ದುಪಡಿ ಮಾಡಿ ಸರಿಪಡಿಸಲು ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದ್ದು, ರೈತರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಕಾರಿ ಡಾ.ಕುಮಾರ ಭರವಸೆ ನೀಡಿದರು.

ತಾಲೂಕು ಕಚೇರಿಗೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರೊಂದಿಗೆ ಆಗಮಿಸಿದ ಅವರು, ಇತ್ತೀಚೆಗೆ ಶ್ರೀರಂಗಪಟ್ಟಣ ಬಂದ್‌ಗೆ ಕರೆ ನೀಡಿದ್ದ ರೈತ ಹಿತರಕ್ಷಣಾ ಸಮಿತಿ ಪದಾಕಾರಿಗಳೊಂದಿಗೆ ಸಭಾಂಗಣದಲ್ಲಿ ಚರ್ಚೆ ನಡೆಸಿದರು.

ಕಂದಾಯ ಇಲಾಖೆಯಲ್ಲಿನ ಕೆಲವರ ಪಹಣಿಗಳಲ್ಲಿ ಕೆಲವು ವ್ಯತ್ಯಾಸಗಳಿಂದ ವಕ್ ಹೆಸರು ನಮೂದಾಗಿದ್ದು, ಇದರಿಂದ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಇಂತಹ ಸಮಸ್ಯೆ ಕಂಡುಬಂದ ದಾಖಲೆಗಳು ಸೇರಿದಂತೆ ಎಲ್ಲ ದಾಖಲೆಗಳನ್ನು ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಕಾರಿಗಳು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳೇ ಪರಿಶೀಲನೆ ನಡೆಸಿ ಅವುಗಳ ಸಮಸ್ಯೆ ಬಗೆಹರಿಸುವ ಜತೆಗೆ ಸಂರಕ್ಷಿಸಲು ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಆದೇಶದ ನೀಡಿದೆ ಎಂದು ತಿಳಿಸಿದರು.

ಈಗಾಗಲೇ ವಕ್ ಮಂಡಳಿ 1964ರಲ್ಲೇ ಗೆಜೆಟ್ ನೋಟಿಫಿಕೇಷನ್ ಅನ್ವಯ ತನ್ನ ಆಸ್ತಿಗಳನ್ನು ಘೋಷಣೆ ಮಾಡಿದ್ದು, ದಾಖಲೆಗಳು ಅಕೃತ ಉಲ್ಲೇಖದಲ್ಲಿದ್ದು, ಯಾವುದೇ ಒತ್ತುವರಿ ಅಥವಾ ವಕ್ ಹೆಸರು ಕಂಡುಬಂದಲ್ಲಿ ಅವುಗಳ ಮೂಲ ದಾಖಲೆಗಳ ಪರಿಶೀಲನೆ ಆಧಾರ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಪ್ರಸ್ತುತ ಕಂದಾಯ ಇಲಾಖೆ ಅಭಿಲೇಖಾಲಯದಲ್ಲಿ ಸರ್ಕಾರದ ಭೂ ದಾಖಲೆ ಸುರಕ್ಷೆ ಯೋಜನೆಯಡಿ ಡಿಜಿಟಲೀಕರಣಕ್ಕೆ ಮುಂದಾಗಿದ್ದು, ಎಲ್ಲ ದಾಖಲೆಗಳನ್ನು ಸುರಕ್ಷತೆಯಿಂದ ನಕಲುಗೊಳಿಸಿ ಡಿಜಿಟಲೀಕರಣಕ್ಕೆ ಪರಿವರ್ತಿಸುವ ಮೂಲಕ ಸಂರಕ್ಷಿಸಲಾಗುತ್ತಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ತಮ್ಮ ದಾಖಲೆಗಳ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ ಎಂದು ಭರವಸೆ ನೀಡಿದರು.

ಮುಖಂಡರಾದ ಚಂದನ್, ವಕೀಲ ಬಾಲರಾಜು, ರೈತ ಮುಖಂಡರಾದ ಕೂಡಲಕುಪ್ಪೆ ನಾಗೇಂದ್ರಸ್ವಾಮಿ, ತಮ್ಮಣ್ಣ, ಕರವೇ ಚಂದಗಾಲು ಶಂಕರ್, ಕೆಂಪೇಗೌಡ ಯುವ ಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ಮುಖಂಡ ಪಿ.ರಾಘು ಇತರರು ಇದ್ದರು.

ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಮನವಿ ಆಲಿಸಿದ ಡಿಸಿ: ತಾಲೂಕು ಕಚೇರಿಯಲ್ಲಿನ ವಿವಿಧ ಕಾರ್ಯಗಳಿಗೆ ಕೈಯಲ್ಲಿ ಅರ್ಜಿ ಹಿಡಿದು ಆಗಮಿಸಿದ್ದ ಸಾರ್ವಜನಿಕರ ಬಳಿ ಖುದ್ದು ಆಗಮಿಸಿದ ಜಿಲ್ಲಾಕಾರಿ ಡಾ.ಕುಮಾರ, ಅವರ ಕುಂದು-ಕೊರತೆಗಳನ್ನು ಆಲಿಸಿ ಮನವಿ ಸ್ವೀಕರಿಸಿ ಪರಿಹರಿಸಿಕೊಡುವ ಭರವಸೆ ನೀಡಿದರು. ಇದರೊಂದಿಗೆ ತಾಲೂಕು ಕಚೇರಿಯಲ್ಲಿ ಸಂಗ್ರಹವಾಗಿರುವ ಕಡತಗಳನ್ನು ವಿಲೆವಾರಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.