ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಸಂಗೊಳ್ಳಿ ರಾಯಣ್ಣನಗರದ ದುರ್ಗಾನಗರ ನಿವಾಸಿಗಳು ಬೀದಿದೀಪ ಅಳವಡಿಸಲು ಕೋರಿ ಅನೇಕ ಮನವಿ ಸಲ್ಲಿಸಿದರೂ ಪಾಲಿಕೆ ಅಽಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಈವರೆಗೆ 5 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೂ ಯಾರೊಬ್ಬರೂ ಸ್ಥಳಕ್ಕೆ ಬಂದು ನೋಡಿಲ್ಲ. ರಾತ್ರಿ ಮಹಿಳೆಯರು, ಮಕ್ಕಳು ಈ ಪ್ರದೇಶದಲ್ಲಿ ಭಯದಲ್ಲೇ ಸಂಚರಿಸಬೇಕಾಗಿದೆ. ಈ ಬಗ್ಗೆ ಸಂಬ0ಧಪಟ್ಟ ಅಽಕಾರಿಗಳು ಗಮನ ಹರಿಸಿ ಬೀದಿದೀಪ ಅಳವಡಿಸಬೇಕು ಎಂದು ಸ್ಥಳೀಯ ನಿವಾಸಿ ಮಾಲಾ ಗೋಡಿ ಒತ್ತಾಯಿಸಿದ್ದಾರೆ.