ಬೆಂಗಳೂರು: ಸೀನಿದ್ರೆ ಮಾತ್ರವಲ್ಲ ಕಣ್ಣೀರಿನಿಂದಲೂ ಮಹಾಮಾರಿ ಕರೊನಾ ವೈರಸ್ ಸೋಂಕು ಹರಡುತ್ತದೆ ಎಂಬ ಮತ್ತೊಂದು ಆಘಾತಕಾರಿ ವರದಿ ಬಹಿರಂಗವಾಗಿದೆ.
ಕರೊನಾ ರೋಗಿಗಳ ಕಣ್ಣೀರಿನಿಂದಲೂ ವೈರಸ್ ಹರಡುತ್ತದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ಸಂಶೋಧನೆಯನ್ನು ನಡೆಸಿದ್ದಾರೆ. ದೇಶದಲ್ಲೇ ಇದು ಮೊದಲ ಅಧ್ಯಯನವಾಗಿದೆ. 45 ಕರೊನಾ ರೋಗಿಗಳನ್ನು ಸಂಶೋಧನೆಗೆ ಒಳಪಡಿಸಿ, ಅವರ ಕಣ್ಣಿನ ದ್ರವವನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಓರ್ವನ ಕಣ್ಣಿನ ದ್ರವದಲ್ಲಿ ವೈರಸ್ಪತ್ತೆಯಾಗಿದೆ. ಆತನಿಗೆ ರೋಗದ ಯಾವುದೇ ಲಕ್ಷಣಗಳು ಇಲ್ಲ. ಆದರೆ, ವೈರಸ್ ಮಾತ್ರ ಇನ್ನು ಇದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: VIDEO| ಶೂ ಧರಿಸಿಕೊಂಡು ಶಿವನ ವಿಗ್ರಹ ಪೀಠದ ಮೇಲೆ ಟಿಕ್ಟಾಕ್ ಮಾಡಿದ ನಾಲ್ವರ ಬಂಧನ
ಇಂತಹ ರೋಗಿಗಳು ಕಣ್ಣನ್ನು ಮುಟ್ಟಿ ನಂತರ ವಸ್ತುಗಳನ್ನು ಮುಟ್ಟಿದರೆ ವೈರಸ್ ಹರಡಲಿದೆ. ಇಡೀ ದೇಹದಲ್ಲಿ ವೈರಸ್ ಇದ್ದ ಮೇಲೆ ಕಣ್ಣಿನಲ್ಲಿ ಇರುವುದು ಹೊಸ ವಿಚಾರವೇನಲ್ಲ ಎಂದು ಅಲ್ಲಗೆಳೆಯುವಂತಿಲ್ಲ. ಕಣ್ಣಿನ ಉಪಯುಕ್ತತೆ ಅಧಿಕವಾಗಿರುವುದರಿಂದ ಸೋಂಕಿನ ತೊಂದರೆಯು ಅಧಿಕ ಎಂಬುವನ್ನು ಮರೆಯುವಂತಿಲ್ಲ.
ರೋಗಿಯೊಬ್ಬನ ಕಣ್ಣೀರಿನ ಹನಿಗಳು ಹೊರಗಡೆ ಬಿದ್ದರೂ ಸಹ ವೈರಸ್ ವಿಸ್ತರಿಸುತ್ತದೆ. ಹೀಗಾಗಿ ಹೊರಗಡೆ ಓಡಾಡುವಾಗ ಕಣ್ಣಿಗೆ ಗ್ಲಾಸ್ ಹಾಕಿಕೊಂಡು ಓಡಾಡುವುದು ಒಳ್ಳೆಯದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕಣ್ಣಿನ ಬಗ್ಗೆ ಈಗಾಗಲೇ ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಅಧ್ಯಯನಗಳು ಬಂದಿವೆ. ಆದರೆ, ಕಣ್ಣಿನಲ್ಲಿ ವೈರಸ್ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)