ಬೆಂಗಳೂರು: ರಾಜ್ಯದಲ್ಲಿ ಇಂದು 8,364 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 10815 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 114 ಸೋಂಕಿತರು ಇಂದು ಮಹಾಮಾರಿಗೆ ಮೃತಪಟ್ಟಿದ್ದಾರೆ.
ರಾಜ್ಯದ ಕರೊನಾ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದ್ದು, 4,04,841 ಮಂದಿ ಈವರೆಗೂ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7922 ಮಂದಿ ಮೃತಪಟ್ಟಿದ್ದು, 98,564 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 822 ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.