ಜಿಲ್ಲೆ

ರಾಜ್ಯದಲ್ಲಿ ಮತ್ತೆ ಲಕ್ಷ ದಾಟಿದ ಕರೊನಾ ಸಕ್ರಿಯ ಪ್ರಕರಣಗಳು: ಇಂದು 94 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 9,366 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 7268 ಮಂದಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿದ್ದಾರೆ. 94 ಸೋಂಕಿತರು ಇಂದು ಮೃತಪಟ್ಟಿದ್ದಾರೆ.

ರಾಜ್ಯದ ಕರೊನಾ ಸೋಂಕಿತರ ಸಂಖ್ಯೆ 4,94,356ಕ್ಕೆ ಏರಿಕೆಯಾಗಿದ್ದು, ಡಿಸ್​ಚಾರ್ಜ್​ ಆದವರು 3,83,077. ಮೃತಪಟ್ಟವರ ಸಂಖ್ಯೆ 7629 ಮತ್ತು ಸಕ್ರಿಯ ಪ್ರಕರಣಗಳು 1,03,631 ಎಂದು ಆರೋಗ್ಯ ಇಲಾಖೆ ತಿಳಿಸಿದೆ. 805 ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.