ಗೋಕಾಕದಲ್ಲಿ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಕೊಡ ಮಾಡಿದ ಆಹಾರ ಧಾನ್ಯದ ಕಿಟ್‌ಗಳನ್ನು ವಿವಿಧ ಇಲಾಖೆ ಸಿಬ್ಬಂದಿಗೆ ಅಮರನಾಥ್ ಜಾರಕಿಹೊಳಿ ವಿತರಿಸಿದರು. ಟಿ.ಆರ್. ಕಾಗಲ, ಮಡೆಪ್ಪ ತೋಳಿನವರ, ಎಸ್.ಎ. ಕೊತವಾಲ ಇತರರು ಇದ್ದರು. 
ಜಿಲ್ಲೆ

ಕರೊನಾ ವಾರಿಯರ್ಸ್‌ ಕಾರ್ಯ ಶ್ಲಾಘನೀಯ

ಗೋಕಾಕ: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ನಿಯಂತ್ರಿಸಲು ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿರುವ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಹೇಳಿದರು.

ನಗರದ ಡಿ.ಎಸ್.ಪಿ. ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಗೆ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಕೊಡ ಮಾಡಿದ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಕರೊನಾ ವೈರಸ್ ಸೋಂಕಿತರು ಪತ್ತೆಯಾಗದಿರುವುದು ನೆಮ್ಮದಿ ತಂದಿದೆ. ಮಹಾಮಾರಿ ಕರೊನಾ ವೈರಸ್ ಬರದಂತೆ ಎಲ್ಲರೂ ಸರ್ಕಾರದ ನಿಯಮ ಪಾಲಿಸಬೇಕು. ಕರೊನಾ ವಾರಿಯರ್ಸ್‌ಗೆ ಸಹಕಾರ ನೀಡಬೇಕು ಎಂದು ಹೇಳಿದರು. ಜಿಪಂ ಸದಸ್ಯರಾದ ಟಿ.ಆರ್. ಕಾಗಲ, ಮಡೆಪ್ಪ ತೋಳಿನವರ, ಹಿರಿಯ ನಗರಸಭಾ ಸದಸ್ಯ ಎಸ್.ಎ. ಕೊತವಾಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವಿ. ದೆಮಶೆಟ್ಟಿ, ಭೀಮಗೌಡ ಪೊಲೀಸ್‌ಪಾಟೀಲ, ಸಿ.ಪಿ.ಐ. ಗೋಪಾಲ ರಾಠೋಡ, ಪಿ.ಎಸ್.ಐ. ಗುರುನಾಥ್ ಚವ್ಹಾಣ, ನಾಗರಾಜ ಖಿಲಾರಿ, ಪಿಎಸ್‌ಐ ಅಮ್ಮಿನಬಾವಿ, ತಾಲೂಕು ವೈದ್ಯಾಧಿಕಾರಿ ರವೀಂದ್ರ ಅಂಟಿನ, ಡಾ. ಆರ್.ಎಸ್. ಬೆನಚಿನಮರಡಿ ಇತರರು ಇದ್ದರು.