ಜಿಲ್ಲೆ

ಕರೊನಾ ಸೇನಾನಿಗಳಿಗೆ ಕೊಡೆ ವಿತರಣೆ

Belagavi

ಬೋರಗಾಂವ: ಸಮೀಪದ ಕೊಗನೋಳಿ ಚೆಕ್‌ಪೋಸ್ಟ್ ಪರಿಶೀಲನೆಗೆ ಶನಿವಾರ ಭೇಟಿ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೊನಾ ಸೇನಾನಿಗಳಿಗೆ ಜೊಲ್ಲೆ ಉದ್ಯೋಗ ಸಮೂಹದಿಂದ ನೀಡಲಾದ ಕೊಡೆ ವಿತರಿಸಿದರು.

ನಂತರ ಮಾತನಾಡಿದ ಅವರು, ಕರೊನಾ ಸೇನಾನಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದ ಜೊಲ್ಲೆ ಉದ್ಯೋಗ ಸಂಸ್ಥೆಯಿಂದ ಕೊಡೆ ವಿತರಿಸುತ್ತಿರುವುದು ಉತ್ತಮ ಸಂಗತಿ ಎಂದರು.

ಯುವ ಮುಖಂಡ ಬಸವಪ್ರಸಾದ ಜೊಲ್ಲೆ ಸಹಕಾರಿ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬಸವಪ್ರಸಾದ ಜೊಲ್ಲೆ, ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪವನ ಪಾಟೀಲ, ಚಂದ್ರಕಾಂತ ಕೋಠಿವಾಲೆ, ಜಯವಂತ ಭಾಟಲೆ, ಪ್ರಕಾಶ ಶಿಂಧೆ, ಕುಮಾರ ಪಾಟೀಲ, ಪಪ್ಪು ಪಾಟೀಲ, ಪ್ರಣವ ಮಾನವಿ, ಆರೋಗ್ಯ ಅಧಿಕಾರಿ ವಿ.ವಿ.ಶಿಂಧೆ, ಮಹಾವೀರ ಬೋರಣ್ಣವರ ಇತರರು ಇದ್ದರು.