ಜಿಲ್ಲೆ

ಉಚಿತ ಹಾಲು ಪಡೆಯಲು ಲಗ್ಗೆರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಸೇರಿದ ಸಾರ್ವಜನಿಕರು

kumarvrl

ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿರುವ ಲಾಕ್​ಡೌನ್​ ಪಾಲನೆ ಮೂಲೆ ಗುಂಪಾಗಿದೆ.

ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಲಗ್ಗೆರೆ ಸೇತುವೆ ಬಳಿ ಭಾನುವಾರ ಬೆಳಗ್ಗೆ ಉಚಿತವಾಗಿ ವಿತರಣೆ ಮಾಡುವ ಹಾಲು ಪಡೆಯಲು ಸಾರ್ವಜನಿಕರು ಗುಂಪಾಗಿ ಸೇರಿದ್ದಾರೆ. ಹಾಲು ವಿತರಣೆ ಮಾಡುವವರು ಎಷ್ಟೇ ಮನವಿ ಮಾಡಿದರೂ ಸಾರ್ವಜನಿಕರು ಸಾಮಾಜಿಕ ಅಂತರ ಪಾಲಿಸದೆ ಗುಂಪಾಗಿ ನಿಂತು ಹಾಲು ಸ್ವೀಕರಿಸಿದರು.

ಸುಭಾಷ್​ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಸೇರಿದ್ದಾರೆ.

ಹಾಲು ವಿತರಣೆ ಮಾಡುವ ಸ್ಥಳದಲ್ಲಿ ಪೊಲೀಸರು ಇಲ್ಲದ ಹಿನ್ನೆಲೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಅಂದಾಜು 200ಕ್ಕೂ ಅಧಿಕ ಮಂದಿ ಸೇರಿದ್ದರು.