ರಿಪ್ಪನ್ಪೇಟೆ: ಸಮಾಜದ ಎಲ್ಲ ಕ್ಷೇತ್ರಗಳಿಗೂ ತನ್ನ ಕಬಂಧಬಾಹು ಚಾಚಿರುವ ಕರೊನಾ ವೈರಸ್ ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಬಸವೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ನೂತನವಾಗಿ ನಿರ್ವಣವಾಗಿರುವ ವಿದ್ಯಾರ್ಥಿಯನಿಯರ ಶೌಚಗೃಹ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳ ಕಲಿಕೆಗೆ ತೊಡಕುಂಟು ಮಾಡಿರುವ ಕರೊನಾ ಶೈಕ್ಷಣಿಕ ಪ್ರಗತಿ ಕುಂಠಿತಗೊಳಿಸಿದೆ. ಇದನ್ನು ಸರಿಮಾಡಲು ಇನ್ನೂ ಕೆಲ ವರ್ಷಗಳೇ ಬೇಕಾಗಬಹುದು ಎಂದರು.
ಪ್ರಜಾಪ್ರಭುತ್ವ, ಸರ್ಕಾರಗಳ, ಭದ್ರಬುನಾದಿಯಾಗಿರುವ ಗ್ರಾಮಾಡಳಿತಕ್ಕೆ ಆಯ್ಕೆಯಾಗಿರುವವರು ರಾಗದ್ವೇಷಗಳಿಲ್ಲದೆ ಪ್ರಾಮಾಣಿಕತೆಯಿಂದ ನೈತಿಕ ಮೌಲ್ಯ ಉಳಿಸಿಕೊಂಡು ಕಾರ್ಯನಿರ್ವಹಿಸಿದರೆ ಜನರಿಗೂ ಸಂತಸವಾಗುತ್ತದೆ ಎಂದು ಹೇಳಿದರು.
ಜಿಪಂ ಸದಸ್ಯೆ ಶ್ವೇತಾಬಂಡಿ ಶೌಚಗೃಹ ಉದ್ಘಾಟಿಸಿದರು. ತಾಪಂ ಸದಸ್ಯ ಎನ್.ಚಂದ್ರೇಶ್, ಮುಖಂಡರಾದ ಬಿ.ಪಿ.ರಾಮಚಂದ್ರ, ಎಚ್.ಎಂ.ವರ್ತೆಶ್, ಎಲ್.ವೈ.ದಾನೇಶಪ್ಪ, ಪೋಷಕ ಸಮಿತಿ ಅಧ್ಯಕ್ಷ ಸೋಮಶೇಖರ, ನೂತನ ಸದಸ್ಯರಾದ ಸುಂದರೇಶ್, ಅಶ್ವಿನಿ, ದೀಪಾ, ಮುಖ್ಯ ಶಿಕ್ಷಕ ಚಂದ್ರಪ್ಪ, ನಟರಾಜ ಇತರರಿದ್ದರು.