ಜಿಲ್ಲೆ

ಕರೊನಾ ಲಸಿಕೆ ಉನ್ನತ ಮಟ್ಟದ ತನಿಖೆಗೆ ಆಗ್ರಹ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಕರೊನಾ ಸಂದರ್ಭದಲ್ಲಿ ಅಂದಿನ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಾವಿರಾರು ಜನರಿಗೆ ಲಸಿ ಹಾಕಿಸಿದ್ದು ಈ ಲಸಿಕೆ ಅಸಲಿತನದ ಬಗ್ಗೆ ಸಿಒಡಿ ತನಿಖೆಯಾಗಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಆಗ್ರಹಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕೆಡಿಪಿ ಸಭೆಯಲ್ಲಿ ಅಂದಿನ ಶಾಸಕರ ಬಳಗೆರೆ ನಿವಾಸದಲ್ಲಿ 2021 ಜೂ.30ರಂದು ಆಯೋಜಿಸಿದ್ದ ಲಸಿಕಾ ಮೇಳದಲ್ಲಿ 10 ಸಾವಿರ ಮಂದಿಗೆ ನೀಡಲಾಗಿರುವ ಕರೊನಾ ಲಸಿಕೆ ಆರೋಗ್ಯ ಇಲಾಖೆಯ ಯಾವ ಬ್ಯಾಚ್‌ನಲ್ಲಿ ಬಂದಿವೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ಆರೋಗ್ಯ ಇಲಾಖೆಯ ಕರ್ತವ್ಯ ಲೋಪವಿದೆ ಎಂದು ಆರೋಪಿಸಿದರು.

ಬೆಂಗಳೂರು, ಮಂಗಳೂರು, ಬೆಳಗಾಂ ಆಸ್ಪತ್ರೆಯಿಂದ ಲಸಿಕೆ ತರಿಸಲಾಗಿದೆ ಎನ್ನಲಾಗಿದ್ದು ಈ ಬಗ್ಗೆ ತನಿಖೆಗೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಗೃಹಸಚಿವರು ನೀವೇ ಇದ್ದೀರಾ ಅಂದಿನ ಶಾಸಕ ಡಿ.ಸಿ.ಗೌರಿಶಂಕರ್, ಡಿಎಚ್‌ಒ ವಿರುದ್ಧ ಸಿಒಡಿ ತನಿಖೆ ನಡೆಸಿ, ಲಸಿಕೆ ನಕಲಿಯೋ, ಅಸಲಿಯೋ ಎಂಬುದು ದೃಢಪಡಿಸಿ ಎಂದು ಪಟ್ಟುಹಿಡಿದರು.