ಮಂಗಳೂರು/ಉಡುಪಿ: ಹಲವು ತಿಂಗಳ ಬಳಿಕ ಮೊದಲ ಬಾರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ತೀರಾ ಕೆಳ ಪ್ರಮಾಣಕ್ಕೆ ಬಂದಿದೆ.
ಸೋಮವಾರದ ವರದಿಯಂತೆ ದ.ಕ. ಜಿಲ್ಲೆಯಲ್ಲಿ 18 ಪ್ರಕರಣಗಳಷ್ಟೇ ದಾಖಲಾಗಿದೆ. ಕೋವಿಡ್‌ನಿಂದ ಯಾವುದೇ ಸಾವು ಉಂಟಾಗಿಲ್ಲ. ಈ ದಿನ 155 ಮಂದಿ ಸೋಂಕು ಮುಕ್ತರಾಗಿದ್ದಾರೆ.
ಈ ಮೂಲಕ ಸಕ್ರಿಯ ಪ್ರಕರಣಗಳು ಸಾವಿರಕ್ಕಿಂತ ಕೆಳಗೆ ಬಂದಿದ್ದು 871ಕ್ಕೆ ತಲುಪಿದೆ. ಒಟ್ಟು ಕರೊನಾ ಪಾಸಿಟಿವ್ ಸಂಖ್ಯೆ 30915ಕ್ಕೆ ತಲುಪಿದೆ. ಈವರೆಗಿನ ಡಿಸ್‌ಚಾರ್ಜ್ ಆದವರು 29356.
ಉಡುಪಿ ಜಿಲ್ಲೆಯಲ್ಲಿ ಸೋಮವಾರ 29 ಮಂದಿಗೆ ಕೋವಿಡ್ ದೃಢಪಟ್ಟಿದೆ. 14 ಮಂದಿ ರೋಗ ಲಕ್ಷಣ ಹೊಂದಿದ್ದು, 15 ಮಂದಿಯಲ್ಲಿ ಯಾವುದೇ ಲಕ್ಷಣಗಳಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ 8 ಮಂದಿಗೆ, ಹೋಂ ಐಸೋಲೇಶನ್‌ನಲ್ಲಿ 21 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1587 ಮಂದಿ ವರದಿ ನೆಗೆಟಿವ್ ಬಂದಿದೆ. 54 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಒಟ್ಟು 353 ಸಕ್ರಿಯ ಪ್ರಕರಣಗಳಿವೆ.