ಗೋಣಿಕೊಪ್ಪ: ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಚೇರಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಇಲ್ಲಿನ ಆಟೋ ಚಾಲಕರಿಗೆ ಮಂಗಳವಾರ ಕರೊನಾ ಪರೀಕ್ಷೆ ಮಾಡಲಾಯಿತು.
ಸುಮಾರು 20 ಕ್ಕೂ ಹೆಚ್ಚು ಚಾಲಕರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಯಿತು. ಸಂಘದ ಅಧ್ಯಕ್ಷ ಸಿ. ಕೆ.ಬೋಪಣ್ಣ, ಪದಾಧಿಕಾರಿಗಳಾದ ಜಪ್ಪು ಸುಬ್ಬಯ್ಯ, ಜಯಾ ಪೂವಯ್ಯ ಇದ್ದರು.