ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ದೇವದುರ್ಗ ನಾಗರಿಕರ ವೇದಿಕೆ ಮನವಿ ಸಲ್ಲಿಸಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಮುಖಂಡರಾದ ಹನುಮಂತಪ್ಪ ಮನ್ನಾಪುರ, ಯಲ್ಲಪ್ಪ ಆಲ್ದರ್ತಿ, ರಂಗಪ್ಪ ಬಲ್ಲಿದವ್, ತಿರುಪತಿ ಹೇಮನೂರು, ರಮೇಶ ದೊರೆ ತೆಗ್ಗಿಹಾಳ ಇತರರಿದ್ದರು. 
ಜಿಲ್ಲೆ

ಕರೊನಾ ತಡೆಗೆ ಮುಂಜಾಗ್ರತೆ ವಹಿಸಿ

Kopala - Desk - Eraveni

ದೇವದುರ್ಗ: ತಾಲೂಕಿನಲ್ಲಿ ಕರೊನಾ ಸೋಂಕು ತಗುಲದಂತೆ ಮುಂಜಾಗ್ರತೆ ವಹಿಸಲು ಒತ್ತಾಯಿಸಿ ದೇವದುರ್ಗ ನಾಗರಿಕರ ವೇದಿಕೆ ಪಟ್ಟಣದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಬುಧವಾರ ಮನವಿ ಸಲ್ಲಿಸಿತು.

ಮೂರು ವರ್ಷಗಳ ನಂತರ ಕರೊನಾ ಆತಂಕ ಮೂಡಿಸಿದೆ. ಈಗಾಗಲೇ ಬೆಂಗಳೂರು ಸೇರಿ ವಿವಿಧ ಜಿಲ್ಲೆಯಲ್ಲಿ ಸೋಂಕು ಹರಡುತ್ತಿದೆ. ಜಿಲ್ಲೆಗೂ ಮಹಾಮಾರಿ ವ್ಯಾಪಿಸುವ ಆತಂಕ ಜನರಲ್ಲಿ ಇದೆ. ಈ ಹಿಂದೆ ಆರೋಗ್ಯ ಇಲಾಖೆ ಹಾಗೂ ಸರ್ಕಾರ ಅಗತ್ಯ ಕ್ರಮಕೈಗೊಳ್ಳದ ಕಾರಣ ಅನೇಕ ಸಾವು ನೋವುಗಳು ಆಗಿವೆ.

ಈಗ ಆರೋಗ್ಯ ಇಲಾಖೆ ಮುಂಜಾಗ್ರತೆ ಕ್ರಮಕೈಗೊಂಡಿಲ್ಲ. ಬೇರೆ ಜಿಲ್ಲೆ, ರಾಜ್ಯದಿಂದ ಸೋಂಕು ಬರುವ ಸಾಧ್ಯತೆಯಿದೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಸೋಂಕಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಶಂಕಿತರನ್ನು ತಪಾಸಣೆ ಮಾಡಿಸಿ ಅಗತ್ಯ ಚಿಕಿತ್ಸೆ ಕೊಡಿಸಬೇಕು.

ಆರೋಗ್ಯ ಇಲಾಖೆ ತುರ್ತು ನಿಗಾಘಟಕ, ಅಗತ್ಯ ಬೆಡ್‌ಗಳನ್ನು ಸಿದ್ಧಪಡಿಸಿ, ಚಿಕಿತ್ಸೆಗೆ ಬೇಕಾದ ಎಲ್ಲ ಅಗತ್ಯ ಔಷಧ ಆಮದು ಮಾಡಿಕೊಳ್ಳಬೇಕು. ಈ ಬಗ್ಗೆ ತಾಲೂಕು ಆಡಳಿತ ನಿಗಾವಹಿಸಬೇಕು ಎಂದು ಒತ್ತಾಯಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಮುಖಂಡರಾದ ಹನುಮಂತಪ್ಪ ಮನ್ನಾಪುರ, ಯಲ್ಲಪ್ಪ ಆಲ್ದರ್ತಿ, ರಂಗಪ್ಪ ಬಲ್ಲಿದವ್, ತಿರುಪತಿ ಹೇಮನೂರು, ರಮೇಶ ದೊರೆ ತೆಗ್ಗಿಹಾಳ, ನಾಗರಾಜ ಮಸ್ಕಿ, ಲಿಂಗಪ್ಪ ಬೆಣಕಲ್ ಇತರರಿದ್ದರು.