ಜಿಲ್ಲೆ

ಕರೊನಾ ಔಷಧ ನೆಪದಲ್ಲಿ ವಂಚನೆ, ಇಬ್ಬರ ಸೆರೆ;  ವಾಟ್ಸ್​ಆ್ಯಪ್​ನಲ್ಲಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಗಳು

ಬೆಂಗಳೂರು: ವಾಟ್ಸ್​ಆ್ಯಪ್​ ಸಂದೇಶದಲ್ಲಿ ಕರೊನಾ ಸೋಂಕಿಗೆ ರೆಮ್​ಡೆಸಿವಿರ್​ ಮತ್ತು ಔಷಧ ಕೊಡುವುದಾಗಿ ನಂಬಿಸಿ ಜನರಿಗೆ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರನ್ನು ಕೇಂದ್ರ ವಿಭಾಗ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದಲ್ಲಿ ನೆಲೆಸಿದ್ದ ನೈಜೀರಿಯಾ ದೇಶದ ಅಳದೆ ಅಬ್ದುಲ್ಲಾ ಯೂಸು್​ (26) ಮತ್ತು ವಿದ್ಯಾರಣ್ಯಪುರದ ಮಹಮ್ಮದ್​ ಇಸ್ಮಾಯಿಲ್​ ಖಾದ್ರಿ (43) ಬಂಧಿತರು. ಬೀದರ್​ ಮತ್ತು ಬೆಂಗಳೂರು ನಗರದಲ್ಲಿ ದಾಖಲಾಗಿದ್ದ 4 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ವಿಭಾಗ ಡಿಸಿಪಿ ಎಂ.ಎನ್​.ಅನುಚೇತ್​ ತಿಳಿಸಿದ್ದಾರೆ.

ಮೊಬೈಲ್​ ಸಿಮ್​ ಕಾರ್ಡ್​ ಮಾರಾಟಗಾರ ಮಹಮ್ಮದ್​, ಬಳಿಗೆ ಸಿಮ್​ ಖರೀದಿಗೆ ಅಬ್ದುಲ್ಲಾ ಬಂದಾಗ ಸ್ನೇಹ ಬೆಳೆದಿರುತ್ತದೆ. ಕರೊನಾ ಕ್ಯೂರ್, ಸೋಂಕು ಆವರಿಸಿದಾಗ ನೈಜೀರಿಯಾ ಪ್ರಜೆ ಆನ್​ಲೈನ್​ ವಂಚನೆಗೆ ಸ್ಕೆಚ್​ ಹಾಕಿದ್ದ. ಸಿಮ್​ ಕಾರ್ಡ್​ ಮತ್ತು 1 ಬ್ಯಾಂಕ್​ ಖಾತೆಗೆ 10 ಸಾವಿರ ರೂ. ಪಡೆದು ಸ್ನೇಹಿತ ಮಹಮ್ಮದ್​ ಬಳಿ ನೈಜೀರಿಯಾ ಪ್ರಜೆ ಪಡೆದಿದ್ದ.

ಕರೊನಾ ಚಿಕಿತ್ಸೆಗೆ ಬಳಸುತ್ತಿರುವ ರೆಮ್​ಡೆಸಿವಿರ್​ ಮತ್ತು ಇನ್ನಿತ್ತರ ಔಷಧಗಳನ್ನು ಆನ್​ಲೈನ್​ನಲ್ಲಿ ಸರಬರಾಜು ಮಾಡುವುದಾಗಿ ವಾಟ್ಸ್​ಆ್ಯಪ್​ನಲ್ಲಿ ಸಂದೇಶಗಳನ್ನು ವೈರಲ್​ ಮಾಡಿದ್ದ. ಸಂಕಷ್ಟದಲ್ಲಿ ಇರುವ ಜನರು ಪೋಸ್ಟರ್​ ನೋಡಿ ಅದರಲ್ಲಿನ ಮೊಬೈಲ್​ ನಂಬರ್​ಗೆ ಕರೆ ಮಾಡಿದಾಗ ಆರ್ಡರ್​ ಪಡೆಯುತ್ತಿದ್ದ. ಆನಂತರ ಮುಂಗಡ ಹಣ ಪಾವತಿ ಮಾಡಬೇಕೆಂದು ಆನ್​ಲೈನ್​ನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ.

ವಿಲ್ಸನ್​ ಗಾರ್ಡನ್​ನ ರಾಜ್​ ಅಗರವಾಲ್​ ಎಂಬಾತ ಆನ್​ಲೈನ್​ನಲ್ಲಿ ಸರ್ಚ್​ ಮಾಡಿ ಕರೊನಾ ಔಷಧ ಬುಕ್​ ಮಾಡಿದ್ದರು. ಆಗ ಆರೋಪಿಗಳು 36 ಸಾವಿರ ರೂ. ಪಡೆದು ವಂಚನೆ ಮಾಡಿದ್ದರು.

ವಿಲ್ಸನ್​ ಗಾರ್ಡನ್​ನ ಮುಜಾಹಿದ್​ ಅಹ್ಮದ್​ ಎಂಬುವರಿಗೆ ಆಸ್ಪತ್ರೆಗೆ ಔಷಧ ಕಳುಹಿಸುವುದಾಗಿ ಹೇಳಿ 85 ಸಾವಿರ ರೂ. ಪಡೆದು ನೈಜೀರಿಯಾ ಪ್ರಜೆ ಮೋಸ ಮಾಡಿದ್ದ.

ಬೀದರ್​ನ ಡಾ.ಚಂದ್ರಪ್ರಕಾಶ್​, ವಾಟ್ಸ್​ಆ್ಯಪ್​ ಸಂದೇಶದಲ್ಲಿದ್ದ ಎಚ್​ಎಲ್​ಎಲ್​ ಲೈ್​ಕೇರ್​ ಲಿಮಿಟೆಡ್​ ಎಂಬ ಕಂಪನಿಯಲ್ಲಿ ಇನ್​ಜಕ್ಷನ್​ ಬುಕ್​ ಮಾಡಿದ್ದರು. ಅವರಿಂದ 85 ಸಾವಿರ ರೂ. ಪಡೆದು ಮೋಸ ಮಾಡಿದ್ದರು. ಇದೇ ರೀತಿ ಮಾರತ್​ಹಳ್ಳಿಯ ಕೃಷನ್​ ಕುಮಾರ್​ ಎಂಬಾತನ ಬಳಿ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

110 ಸಿಮ್​ ಕಾರ್ಡ್​ ಜಪ್ತಿ : ಬಂಧಿತರಿಂದ 4 ಮೊಬೈಲ್​, 1 ಹಾರ್ಡ್​ಡಿಸ್ಕ್​, 110 ವಿವಿಧ ಕಂಪನಿಯ ಸಿಮ್​ ಕಾರ್ಡ್​, 10 ಬ್ಯಾಂಕ್​ ಖಾತೆಗಳಲ್ಲಿ 4 ಲಕ್ಷ ರೂ.ಜಪ್ತಿ ಮಾಡಲಾಗಿದೆ. ಇದೇ ರೀತಿ ಆರೋಪಿಗಳು ವಂಚನೆ ಮಾಡಿರುವ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.