ಜಿಲ್ಲೆ

ಮದ್ಯ ಮುಕ್ತ ಕರ್ನಾಟಕವನ್ನಾಗಿಸಿ- ಕರ್ನಾಟಕ ರಾಷ್ಟ್ರ ಸಮಿತಿ, ಮದ್ಯ ನಿಷೇಧ ಆಂದೊಲನಾ ಸಮಿತಿಯಿಂದ ಒತ್ತಾಯ

ರಾಯಚೂರು: ಕರೊನಾ ಸಂಕಷ್ಟದ ನಡುವೆಯೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ಮದ್ಯ ನಿಷೇಧ ಆಂದೊಲನಾ ಸಮಿತಿಗಳು ಜಂಟಿಯಾಗಿ ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕರೊನಾ ಭೀತಿಯಿಂದ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಅಗಿತ್ತು. ಹೀಗಾಗಿ ಜನ ನಿಧಾನವಾಗಿ ಹೊಂದಿಕೊಳ್ಳುತ್ತಿರುವಾಗಲೆ ಸರ್ಕಾರ ಅತುರದ ನಿರ್ಧಾರದಿಂದ ಬಡವರನ್ನು ಬೀದಿಗೆ ಬಾರುವಂತಾಗಿದೆ. ಅಲ್ಲದೆ, ಶೇ.92ಕ್ಕಿಂತಲೂ ಹೆಚ್ಚು ಆದಾಯ ತೆರಿಗೆಗಳಿಂದ ಸಂಗ್ರಹವಾದರೂ ಸರ್ಕಾರ ಆರ್ಥಿಕ ಸಂಕಷ್ಟ ನಿವಾರಿಸಲು ಮದ್ಯ ಮಾರಾಟಕ್ಕೆ ಮುಂದಾಗಿರುವುದು ಶೋಚನಿಯ. ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದ್ದು, ಸರ್ಕಾರ ಕೂಡಲೆ ಮದ್ಯ ಮಾರಟದ ಕ್ರಮ ಹಿಂಪಡೆದು ಮದ್ಯ ಮುಕ್ತ ಕರ್ನಾಕವನ್ನಾಗಿಸಬೇಕು. ಆಸ್ಪತ್ರೆಗಳಲ್ಲಿ ಮದ್ಯವರ್ಜನ ಕೇಂದ್ರಗಳನ್ನು ತೆರೆದು ವ್ಯಸನಿಗಳಿಗೆ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು. ಪಿ.ಶೇಖರ ಉಪ್ಪಳ, ವಿದ್ಯಾಪಾಟೀಲ್,ಅತೀಯಾ ಸುಲ್ತಾನಾ, ಪಲ್ಲವಿ, ಗೌರಮ್ಮ, ವೆಂಕಟೇಶ ಇನ್ನಿತರರಿದ್ದರು.