ಬುಡರಕಟ್ಟಿ ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಜಿಪಂ ಸದಸ್ಯ ಶಂಕರ ಮಾಡಲಗಿ ಮಾತನಾಡಿದರು. ಬುಡರಕಟ್ಟಿ ಗ್ರಾಪಂ ಅಧ್ಯಕ್ಷ ಶಂಕರ ಮಂಗಳಗಟ್ಟಿ, ಪಿಡಿಒ ಭಾಗ್ಯಶ್ರೀ ಬ್ಯಾಹಟ್ಟಿ ಹಾಗೂ ದೊಡವಾಡ ಪಿಡಿಒ ಸುಭಾಷ ದಾನಪ್ಪನವರ ಇದ್ದರು. 
ಜಿಲ್ಲೆ

ಕರೊನಾ ಸೋಂಕು ನಿಯಂತ್ರಣಕ್ಕೆ ಸಹಕರಿಸಿ

ದೊಡವಾಡ: ಕರೊನಾ ಸೋಂಕು ಹರಡದಂತೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದು, ಅವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಪಂ ಸದಸ್ಯ ಶಂಕರ ಮಾಡಲಗಿ ಹೇಳಿದರು.

ಬೈಲಹೊಂಗಲ ತಾಲೂಕಿನ ದೊಡವಾಡ ಹಾಗೂ ಗುಡಕಟ್ಟಿ, ಚಿಕ್ಕಬೇಳಿಕಟ್ಟಿ, ಗೋವನಕೊಪ್ಪ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಬುಡರಕಟ್ಪಿ ಗ್ರಾಪಂನಲ್ಲಿ ನಡೆದ ಪಿಡಿಒ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸಾವಿರಾರು ಜನರು ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಹೊರಗಿನಿಂದ ಬಂದವರ ಮೇಲೆ ನಿಗಾವಹಿಸಬೇಕು. ಜತೆಗೆ ಪ್ರಮುಖ ಬೀದಿಗಳಲ್ಲಿ ರೋಗ ನಿವಾರಕ ದ್ರಾವಣ ಸಿಂಪಡಿಸಬೇಕೆಂದು ಪಿಡಿಒಗಳಿಗೆ ಸೂಚಿಸಿದರು. ಬುಡರಕಟ್ಟಿ ಗ್ರಾಪಂ ಅಧ್ಯಕ್ಷ ಶಂಕರ ಮಂಗಳಗಟ್ಟಿ, ಪಿಡಿಒ ಭಾಗ್ಯಶ್ರೀ ಬ್ಯಾಹಟ್ಟಿ ಹಾಗೂ ದೊಡವಾಡ ಪಿಡಿಒ ಸುಭಾಷ ದಾನಪ್ಪನವರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.