ಬೆಳಗಾವಿ: ಜಿಲ್ಲೆಯಲ್ಲಿ 22 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂವರು ಸಾವನಪ್ಪಿದ್ದಾರೆ. ಸೋಂಕು ದೃಢಪಟ್ಟವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈಗಾಗಲೇ ಸೋಂಕಿತರಲ್ಲಿ ಮೂವರು ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾರೆ. ಇನ್ನೂ 17 ಜನರ ಆಸ್ಪತ್ರೆಯಲ್ಲಿದ್ದಾರೆ. 12 ಜನರ ಗಂಟಲು ಮಾದರಿ ವರದಿ ಬರುವುದು ಬಾಕಿ ಉಳಿದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.